ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನಲ್ಲಿ 400 ಹುದ್ದೆಗಳ ನೇಮಕಾತಿ - Mahanayaka

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನಲ್ಲಿ 400 ಹುದ್ದೆಗಳ ನೇಮಕಾತಿ

bhel recruitment
27/01/2025

ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಡಿಪ್ಲೋಮ ಹಾಗೂ ಇಂಜಿನಿಯರಿಂಗ್ ಲೆವೆಲ್ ನ ವಿವಿಧ 400 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಡಿಪ್ಲೋಮಾ ಹಾಗೂ ಪದವಿ ಮುಗಿಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಶ್ವದಾದ್ಯಂತ ಹೆಸರಾದ ಕಂಪನಿ BHEL (Bharat Heavy ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನಲ್ಲಿ ಒಟ್ಟು 400 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಸಂಪೂರ್ಣ ಅವಶ್ಯಕ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಹುದ್ದೆಗಳ ವಿಂಗಡಣೆ :

ಒಟ್ಟು 400 ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ.

* ಇಂಜಿನಿಯರ್ ಟ್ರೈನಿ — 150 ಹುದ್ದೆಗಳು

* ಸೂಪರ್ವೈಸರ್ ಟ್ರೈನಿ — 250 ಹುದ್ದೆಗಳು

ಅರ್ಹತೆಗಳೇನು?:

ಶೈಕ್ಷಣಿಕ ಅರ್ಹತೆ ನೋಡುವುದಾದರೆ ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮ್ ಅಥವಾ ಇಂಜಿನಿಯರಿಂಗ ಪದವಿ ಮುಗಿಸಿರಬೇಕು.

ಮಾಸಿಕ ವೇತನ:

* ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಆಯ್ಕೆಯಾದವರಿಗೆ 60,000ರೂ.ಯಿಂದ 1.8 ಲಕ್ಷ ರೂ. ವರೆಗೆ ಇರಲಿದೆ.

* ಸೂಪರ್ವೈಸರ್ ಟ್ರೈನಿ ಹುದ್ದೆಗಳಿಗೆ ಆಯ್ಕೆಯಾದವರಿಗೆ 33,500ರೂ. ಯಿಂದ 1.2ಲಕ್ಷ ರೂ. ವರೆಗೆ ಇರಲಿದೆ.

ಅರ್ಜಿ ಶುಲ್ಕ ವಿವರ :

* ಸಾಮಾನ್ಯ, ಆರ್ಥಿಕ ಹಿಂದುಳಿದ ವರ್ಗದವರಿಗೆ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ — 1,072ರೂ.

* ಉಳಿದ ವರ್ಗದವರಿಗೆ — 472ರೂ.

ಅರ್ಜಿ ಸಲ್ಲಿಸುವ ವಿವರ :

* ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ದಿನಾಂಕ — 1ನೇ ಫೆಬ್ರವರಿ 2025

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ — 28ನೇ ಫೆಬ್ರವರಿ 2025

ಅರ್ಜಿ ಸಲ್ಲಿಕೆಗೆ ಅಧಿಕೃತ ಜಾಲತಾಣ — https://careers.bhel.in

 

 

ಇತ್ತೀಚಿನ ಸುದ್ದಿ