ಮಹಾಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ: 30 ಮಂದಿ ಸಾವು; 25 ಶವಗಳ ಗುರುತು ಪತ್ತೆ

ಮಹಾ ಕುಂಭದ ಸಂಗಮ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ 30 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಮೌನಿ ಅಮಾವಾಸ್ಯೆಯ ಶುಭ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಸ್ಥಳಾವಕಾಶಕ್ಕಾಗಿ ಕೋಟ್ಯಂತರ ಯಾತ್ರಾರ್ಥಿಗಳು ಈ ಪ್ರದೇಶದಲ್ಲಿ ಜಮಾಯಿಸಿದ್ದರಿಂದ ಈ ದುರಂತ ಸಂಭವಿಸಿತ್ತು.
ಪ್ರಯಾಗ್ ರಾಜ್ ಡಿಐಜಿ ವೈಭವ್ ಕೃಷ್ಣ ಮಾತನಾಡಿ, ಬ್ರಹ್ಮ ಮುಹೂರ್ತಕ್ಕೆ ಮುಂಚಿತವಾಗಿ ಅಖಾರಾ ಮಾರ್ಗದಲ್ಲಿ ಮುಂಜಾನೆ 1 ರಿಂದ 2 ಗಂಟೆಯ ನಡುವೆ ಭಾರಿ ಜನಸಮೂಹ ಜಮಾಯಿಸಿತು. ಹೀಗಾಗಿ ಜನದಟ್ಟಣೆಯಿಂದಾಗಿ, ಇನ್ನೊಂದು ಬದಿಯ ಬ್ಯಾರಿಕೇಡ್ ಗಳು ಮುರಿದುಹೋಗಿದೆ. ಇನ್ನೊಂದು ಬದಿಯಲ್ಲಿ ಬ್ರಹ್ಮ ಮುಹೂರ್ತದ ಪವಿತ್ರ ಸ್ನಾನ ಮಾಡಲು ಕಾಯುತ್ತಿದ್ದ ಭಕ್ತರ ಮೇಲೆ ಜನಸಮೂಹ ಹರಿದಿದೆ.
“ಸುಮಾರು 90 ಜನರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ ದುರದೃಷ್ಟವಶಾತ್, 30 ಭಕ್ತರು ಸಾವನ್ನಪ್ಪಿದ್ದಾರೆ. ಈ 30 ಮಂದಿಯಲ್ಲಿ 25 ಮಂದಿಯನ್ನು ಗುರುತಿಸಲಾಗಿದ್ದು, ಉಳಿದವರನ್ನು ಇನ್ನೂ ಗುರುತಿಸಬೇಕಿದೆ. ಇವರಲ್ಲಿ ಕರ್ನಾಟಕದ 4, ಅಸ್ಸಾಂನ 1, ಗುಜರಾತ್ ನ 1 ಮಂದಿ ಸೇರಿದ್ದಾರೆ. 36 ಜನರು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಡಿಐಜಿ ಕ್ರಿಹ್ನಾ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj