ಕೊಟ್ಟಿಗೆಹಾರದ ಪ್ರೌಢಶಾಲೆ ಶಿಕ್ಷಕಿ ನೌಶಿಬರವರಿಗೆ “ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ - Mahanayaka

ಕೊಟ್ಟಿಗೆಹಾರದ ಪ್ರೌಢಶಾಲೆ ಶಿಕ್ಷಕಿ ನೌಶಿಬರವರಿಗೆ “ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ

Naushiba
30/01/2025

ಕೊಟ್ಟಿಗೆಹಾರ:  ಪ್ರತಿಬಿಂಬ ಟ್ರಸ್ಟ್ ಬೆಂಗಳೂರು(ರಿ )ವತಿಯಿಂದ ಕೊಟ್ಟಿಗೆಹಾರದ ಪ್ರೌಢಶಾಲೆ  ಶಿಕ್ಷಕಿ ನೌಶಿಬ ರವರಿಗೆ “ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ ದೊರಕಿದೆ.

ಪ್ರತಿಬಿಂಬ ಟ್ರಸ್ಟ್ (ರಿ )ಬೆಂಗಳೂರು ವತಿಯಿಂದ ನೀಡುವ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನೀಡುವ ಅತ್ಯುತ್ತಮ ಶಿಕ್ಷಕ/ಕಿ ಪ್ರಶಸ್ತಿಗೆ 7 ಜನ ಶಿಕ್ಷಕ/ಕಿ ಯರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಮೂಡಿಗೆರೆ ತಾಲೂಕ್ಕಿನ ಕೊಟ್ಟಿಗೆಹಾರ ಪ್ರೌಢ ಶಾಲೆ ಶಿಕ್ಷಕಿ ನೌಶಿಬ ಪಿ.ಎಂ. ರವರನ್ನು ಆಯ್ಕೆಮಾಡಿದ್ದರು.

ಸರ್ಕಾರಿ ಕನ್ನಡ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಕೆಲಸಗಳಲ್ಲಿ ಅವರ ಶ್ರಮ ಹಾಗೂ ಸಮರ್ಪಣಾ ಮನೋಭಾವವನ್ನು ಗುರುತಿಸಿ ಪ್ರತಿಬಿಂಬ ಟ್ರಸ್ಟ್ (ರಿ )ಬೆಂಗಳೂರು ಸಂಸ್ಥೆಯು 2024-25ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ