ತರೀಕೆರೆಗೆ ಹೋಗೋ ಪ್ರವಾಸಿಗರೇ ಎಚ್ಚರ: ಹೊಂಚು ಹಾಕಿ ಕುಳಿತ ವ್ಯಾಘ್ರ - Mahanayaka

ತರೀಕೆರೆಗೆ ಹೋಗೋ ಪ್ರವಾಸಿಗರೇ ಎಚ್ಚರ: ಹೊಂಚು ಹಾಕಿ ಕುಳಿತ ವ್ಯಾಘ್ರ

tiger in trarikere
31/01/2025

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ಹೋಗೋ ಪ್ರವಾಸಿಗರು ಎಚ್ಚರವಹಿಸಿ ಪ್ರಯಾಣಿಸಬೇಕಿದೆ. ಯಾಕೆಂದರೆ ಕಲ್ಲತ್ತಿಗರಿ–ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ನಾಗರಿಕರು ಬೆಚ್ಚಿಬಿದ್ದಿದ್ದಾರೆ.

ಕೆಮ್ಮಣ್ಣುಗುಂಡಿಗೆ ತೆರಳೋ ರಸ್ತೆ ಮಧ್ಯೆ ಪ್ರವಾಸಿಗರಿಗೆ ವ್ಯಾಘ್ರನ ದರ್ಶನವಾಗಿದೆ. ಪ್ರವಾಸಕ್ಕೆಂದು ಕೆಮ್ಮಣ್ಣುಗುಂಡಿಗೆ ತೆರಳುತ್ತಿದ್ದವರಿಗೆ ಬೆಳಗಿನ ಜಾವ ರಸ್ತೆ ಬದಿಯಲ್ಲಿ ಹುಲಿ ಎದುರಾಗಿದೆ. ಹುಲಿಯನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು ವಾಹನ ಅಲ್ಲಿಯೇ ನಿಲ್ಲಿಸಿ, ವಿಡಿಯೋ ಸೆರೆ ಹಿಡಿದಿದ್ದಾರೆ.

ಕೆಮ್ಮಣ್ಣುಗುಂಡಿ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶವಾಗಿದೆ, ಹುಲಿ ಕಂಡು ಮುಂದೆ ಹೋಗದೆ ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಸುಮಾರು ಅರ್ಧ ಗಂಟೆ ಬಳಿಕ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟಿ ಹುಲಿ ಸಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ