10 ಲಕ್ಷ ರೂ. ಗೆ ಪತಿಯ ಕಿಡ್ನಿ ಮಾರಿ ಪ್ರಿಯಕರನೊಂದಿಗೆ ಎಸ್ಕೇಪ್ ಆದ ಪತ್ನಿ!
ಪಶ್ಚಿಮ ಬಂಗಾಳ: ಪತಿಯ ಕಿಡ್ನಿಯನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಪತ್ನಿಯೊಬ್ಬಳು ಪ್ರಿಯಕರನೊಂದಿಗೆ ರಾತ್ರೋ ರಾತ್ರಿ ಪರಾರಿಯಾಗಿರುವ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್ ಕ್ರಿಲ್ ನಲ್ಲಿ ನಡೆದಿದೆ.
ಚಾನ್ ಕ್ರಿಲ್ ನಲ್ಲಿ ಪತಿ ವರ್ಣಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಆತನ ಪತ್ನಿ ಕಿಡ್ನಿ ಮಾರಾಟ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ ಎಂಬ ನೆಪವೊಡ್ಡಿ ನಿರಂತರವಾಗಿ ಸತಾಯಿಸುತ್ತಿದ್ದಳು.
ಪತ್ನಿಯ ಕಾಟದಿಂದ ಬೇಸತ್ತ ಪತಿ, ಮಗಳ ಭವಿಷ್ಯಕ್ಕಾಗಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದ. ಬಳಿಕ ಒಂದು ತಿಂಗಳ ನಂತರ ೊಂದು ಮೂತ್ರ ಪಿಂಡವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ.
ಕಿಡ್ನಿ ಮಾರಾಟ ಮಾಡಿದ ಹಣ ಪತ್ನಿಯ ಕೈಗೆ ಸೇರುತ್ತಿದ್ದಂತೆಯೇ, ಹಣವನ್ನು ಬ್ಯಾಂಕಿಗೆ ಹಾಕಿ ಬರುತ್ತೇನೆ ಎಂದು ತನ್ನ ಬಳಿಯೇ ಇರಿಸಿಕೊಂಡ ಪತ್ನಿ ನಡು ರಾತ್ರಿ ತನ್ನ ಪ್ರಿಯಕರನೊಂದಿಗೆ ಊರು ಬಿಟ್ಟು ಎಸ್ಕೇಪ್ ಆಗಿದ್ದಾಳೆ.
ಕೆಲವು ದಿನಗಳ ನಂತರ ಶುಕ್ರವಾರ ಪತಿಗೆ ಈ ವಿಚಾರ ಗೊತ್ತಾಗಿದೆ. ರವಿದಾಸ್ ಎಂಬಾತನೊಂದಿಗೆ ಪತ್ನಿ ಎಸ್ಕೇಪ್ ಆಗಿದ್ದು, ಬಾರೇಕ್ ಪುರದ ಸುಭಾಷ್ ಕಾಲೋನಿಯಲ್ಲಿದ್ದಾಳೆ ಎನ್ನುವುದು ತಿಳಿಯುತ್ತಿದ್ದಂತೆಯೇ ತನ್ನ ಕುಟುಂಬದೊಂದಿಗೆ ಪತಿ ಸ್ಥಳಕ್ಕೆ ತೆರಳಿದ್ದಾನೆ.
ಈ ವೇಳೆ ನಿನಗೆ ವಿಚ್ಛೇದನ ನೀಡುತ್ತೇನೆ ಎಂದು ಪತ್ನಿ ಅವಾಜ್ ಹಾಕಿದ್ದಾಳೆ. ಸದ್ಯ ಮೋಸ ಹೋದ ಪತಿ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ ದೊರಕಿಸುವಂತೆ ದೂರು ನೀಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: