ಮೋಡಿ ಮಾಡಿ ಗಂಡನ ಕಿಡ್ನಿ ತೆಗೆಸಿ ಮಾರಾಟ ಮಾಡಿದ್ಲು: ಸಿಕ್ಕ 10 ಲಕ್ಷ ಹಣದ ಜೊತೆ ಪ್ರಿಯಕರನೊಂದಿಗೆ ಪತ್ನಿ ಎಸ್ಕೇಪ್! - Mahanayaka

ಮೋಡಿ ಮಾಡಿ ಗಂಡನ ಕಿಡ್ನಿ ತೆಗೆಸಿ ಮಾರಾಟ ಮಾಡಿದ್ಲು: ಸಿಕ್ಕ 10 ಲಕ್ಷ ಹಣದ ಜೊತೆ ಪ್ರಿಯಕರನೊಂದಿಗೆ ಪತ್ನಿ ಎಸ್ಕೇಪ್!

03/02/2025

ಪಶ್ಚಿಮ ಬಂಗಾಳದ ಹೌರಾದಲ್ಲಿ ಮಹಿಳೆಯೊಬ್ಬಳು ತನ್ನ ಮೂತ್ರಪಿಂಡವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡುವಂತೆ ಪತಿಯನ್ನು ಮನವೊಲಿಸಿದ ಘಟನೆ ನಡೆದಿದೆ. ದುರಂತ ಅಂದ್ರೆ ಶಸ್ತ್ರಚಿಕಿತ್ಸೆಯ ನಂತರ ಅವಳು ಹಣ ಮತ್ತು ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ಪೊಲೀಸ್ ದೂರಿನ ಪ್ರಕಾರ, ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕು. ಜೊತೆಗೆ ತಮ್ಮ 12 ವರ್ಷದ ಮಗಳನ್ನು ಉತ್ತಮ ಶಾಲೆಗೆ ಸೇರಿಸಲು ತಮ್ಮ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಮಹಿಳೆ ಒಂದು ವರ್ಷದಿಂದ ತನ್ನ ಗಂಡನ ಮೇಲೆ ಒತ್ತಡ ಹೇರುತ್ತಿದ್ದಳು. ಹೀಗಾಗಿ ಗಂಡ ತನ್ನ ಪತ್ನಿಯ ಮಾತನ್ನು ಒಪ್ಪಿಕೊಂಡಿದ್ದರು. ಕಳೆದ ತಿಂಗಳು ಶಸ್ತ್ರಚಿಕಿತ್ಸೆಯ ನಂತರ 10 ಲಕ್ಷ ರೂ.ಗಳನ್ನು ಮನೆಗೆ ತಂದರು. ನಂತರ ಅವರ ಪತ್ನಿ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಸೂಚನೆ ನೀಡಿದರು.

ಸ್ಪಲ್ಪ ಸಮಯದ ನಂತರ ಪತ್ನಿಯು ಗಂಡನನ್ನು ಬಿಟ್ಟು 10 ಲಕ್ಷ ಹಣ ಅಲ್ಲದೇ ಅಲ್ಲುದ್ದ ಹೆಚ್ಚುವರಿ ಹಣವನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದಾಳೆ. ಅಲ್ಲದೇ ಇನ್ನೂ ಕೆಲವು ವಸ್ತುಗಳು ಕಾಣೆಯಾಗಿರುವುದನ್ನು ನಾನು ಕಂಡುಕೊಂಡೆ” ಎಂದು ಆ ವ್ಯಕ್ತಿ ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿಕೆ ನೀಡಿದ್ದಾರೆ.

ಸ್ನೇಹಿತರ ಸಹಾಯದಿಂದ ಕೊನೆಗೂ ಅವಳನ್ನು ಕೋಲ್ಕತ್ತಾದಲ್ಲಿ ಪತ್ತೆಹಚ್ಚಲಾಗಿದೆ. ಆಗ ಭಯಾನಕ ಸಂಗತಿಯೊಂದು ಹೊರಬಿದ್ದಿದೆ. ಅವಳು ಒಂದು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿ ಜತೆ ಸಂಬಂಧ ಹೊಂದಿ ವಾಸಿಸುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಕೆಯ ಪತಿ, ಅತ್ತೆ ಮತ್ತು ಮಗಳು ಮಹಿಳೆಯ ನಿವಾಸಕ್ಕೆ ಹೋದಾಗ ಆಕೆ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ. ತನ್ನ 16 ವರ್ಷಗಳ ವೈವಾಹಿಕ ಜೀವನದಲ್ಲಿ ತನ್ನ ಅತ್ತೆ ಮಾವಂದಿರಿಂದ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಾಗಿ ಆಕೆಯ ಪ್ರಿಯಕರ ಹೇಳಿದ್ದಾನೆ.
ಮಹಿಳೆಯು ತನ್ನ ಅತ್ತೆ-ಮಾವನ ಮನೆಯಿಂದ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ ಎಂದು ಆ ವ್ಯಕ್ತಿ ನಿರಾಕರಿಸಿದ್ದು, ಅವಳು ತನ್ನ ಸ್ವಂತ ಉಳಿತಾಯವನ್ನು ಮಾತ್ರ ತೆಗೆದುಕೊಂಡಿದ್ದಾಳೆ ಎಂದು ಹೇಳಿದ್ದಾರೆ.

ಪ್ರೇಮಿ ಮತ್ತು ಗಂಡನ ಕುಟುಂಬದ ನಡುವಿನ ಸಂಭಾಷಣೆಯ ವೀಡಿಯೊ ತುಣುಕು ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂದಿನ ಕ್ರಮ ತೆಗೆದುಕೊಳ್ಳುವ ಮೊದಲು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪ್ರಶ್ನಿಸಲು ಅವರು ತೀರ್ಮಾನಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ