ಇಂತಹವರು ಇರ್ತಾರೆ! ಪತ್ನಿಯ ಖಾಸಗಿ ವಿಡಿಯೋಗಳನ್ನು ಆನ್ ಲೈನಲ್ಲಿ ಪೋಸ್ಟ್ ಮಾಡಿದ ಪತಿ!
ಡೈವೋರ್ಸ್ ಕೊಡು ಎಂದು ಒತ್ತಾಯಿಸಿದ 21 ವರ್ಷದ ಪತ್ನಿಯ ಖಾಸಗಿ ವೀಡಿಯೊಗಳನ್ನು ವ್ಯಕ್ತಿಯೊಬ್ಬ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ ಘಟನೆ ಅಹಮದಾಬಾದ್ ಲ್ಲಿ ನಡೆದಿದೆ. ಮಹಿಳೆಯ ದೂರಿನ ಆಧಾರದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗಿ ಒಂದು ವರ್ಷವಾಗಿದ್ದು, ಕೆಲವು ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮದುವೆ ನಂತರ ತೊಂದರೆಗಳನ್ನು ಎದುರಿಸಿದ ನಂತರ ಮಹಿಳೆ ತನ್ನ ಹೆತ್ತವರ ಮನೆಗೆ ಮರಳಿದ್ದಳು. ಬೇರೆ ಬೇರೆ ಇದ್ದುದರಿಂದ್ದ ವಿಚ್ಛೇದನ ಪಡೆಯುವ ನಿರ್ಧಾರವನ್ನು ಅವಳು ತನ್ನ ಗಂಡನಿಗೆ ತಿಳಿಸಿದಳು. ಇದಕ್ಕೆ ಪ್ರತೀಕಾರವಾಗಿ, ಅವನು ಅವಳ ಆಪ್ತ ಚಿತ್ರಗಳು ಮತ್ತು ವೀಡಿಯೊಗಳನ್ನು ಅವಳ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಅಶ್ಲೀಲ ಕಾಮೆಂಟ್ ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಇಬ್ಬರೂ ಒಂದೇ ಇನ್ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದರು. ಅವಳು ತನ್ನ ವೈವಾಹಿಕ ಜೀವನಕ್ಕೆ ಮರಳದಿರಲು ನಿರ್ಧರಿಸಿದ ನಂತರ ಮತ್ತು ಔಪಚಾರಿಕವಾಗಿ ವಿಚ್ಛೇದನವನ್ನು ಕೋರಿದ ನಂತರ, ಆಕೆಯ ಪತಿ ಖಾಸಗಿ ವೀಡಿಯೊಗಳನ್ನು ಆನ್ ಲೈನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ತಕ್ಷಣ ಗುಜರಾತ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj