ಧಾರ್ಮಿಕ ಸಂಘರ್ಷ ತಪ್ಪಿಸಲು ಮುಕ್ತ ಚಿಂತನೆ, ಆತ್ಮಾವಲೋಕನ ಮುಖ್ಯ: ಅಜಿತ್ ದೋವಲ್ ಅಭಿಮತ
ಜನರು ತಮ್ಮ ಮಿದುಳನ್ನು ಸೆರೆಯಲ್ಲಿ ಇಡಲು ಬಿಡಬಾರದು ಮುಕ್ತವಾಗಿ ಯೋಚಿಸಲು ಸಾಧ್ಯವಾಗದ ತಲೆಮಾರುಗಳು ಇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಇಸ್ಲಾಂ, ಸರ್ವಾಧಿಕಾರ ಮತ್ತು ಅಭಿವೃದ್ಧಿಯ ಕೊರತೆ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಸಂವಾದ ಮತ್ತು ಸಂಘರ್ಷ ಪರಿಹಾರದ ಮಹತ್ವವನ್ನು ಒತ್ತಿ ಹೇಳಿದ ದೋವಲ್, ಧರ್ಮ ಮತ್ತು ರಾಜ್ಯದ ನಡುವಿನ ಸಂಘರ್ಷ ಮುಂದುವರಿಯುತ್ತಿದೆ. ಆದರೆ ನಾವು ಪರಿಹಾರವನ್ನು ಹುಡುಕುತ್ತಿದ್ದೇವೆಯೇ ಎಂಬುದು ಮುಖ್ಯವಾಗಿದೆ ಎಂದು ಹೇಳಿದರು.
“ಧರ್ಮ ಅಥವಾ ರಾಜ್ಯದ ನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು. ನಮ್ಮ ಮಿದುಳನ್ನು ಸೆರೆಯಲ್ಲಿಡಲು ನಾವು ಬಿಡಬಾರದು. ನೀವು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ, ನೀವು ಸಮಯ ಮತ್ತು ದಿಕ್ಕನ್ನು ಕಳೆದುಕೊಳ್ಳುತ್ತೀರಿ. ಆತ್ಮಾವಲೋಕನವು ತುಂಬಾ ತಡವಾಗಿ ನಡೆದರೆ, ನೀವು ಹಿಂದೆ ಬೀಳುತ್ತೀರಿ” ಎಂದು ದೋವಲ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj