ಟ್ಯಾಕ್ಸಿ ಡ್ರೈವರ್ ಗಳ ನಡುವಿನ ಜಗಳ: ಪೊಲೀಸ್ ಸಿಬ್ಬಂದಿಯ ವೀಡಿಯೋ ಮಾಡಿದವರು ತಪ್ಪಿತಸ್ಥರು ಎಂದ ದುಬೈ ಕೋರ್ಟ್ - Mahanayaka

ಟ್ಯಾಕ್ಸಿ ಡ್ರೈವರ್ ಗಳ ನಡುವಿನ ಜಗಳ: ಪೊಲೀಸ್ ಸಿಬ್ಬಂದಿಯ ವೀಡಿಯೋ ಮಾಡಿದವರು ತಪ್ಪಿತಸ್ಥರು ಎಂದ ದುಬೈ ಕೋರ್ಟ್

03/02/2025

ಟ್ಯಾಕ್ಸಿ ಡ್ರೈವರ್ ಗಳ ನಡುವಿನ ಜಗಳಕ್ಕೆ ಸಂಬಂಧಿಸಿ ಅವರನ್ನು ಪ್ರಶ್ನಿಸುತ್ತಿರುವ ಪೊಲೀಸ್ ಸಿಬ್ಬಂದಿಯ ವಿಡಿಯೋ ಚಿತ್ರೀಕರಿಸಿದ ಯುವತಿ ಮತ್ತು ಆಕೆಯ ಗೆಳೆಯನನ್ನು ತಪ್ಪಿತಸ್ಥ ಎಂದು ದುಬೈ ಕೋರ್ಟ್ ತೀರ್ಪು ನೀಡಿದೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಒಪ್ಪಿಗೆ ಇಲ್ಲದೆ ಅವರ ವಿಡಿಯೋ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಆರೋಪಿಗೆ 2000 ದಿರ್ಹಮ್ ದಂಡವನ್ನು ವಿಧಿಸಲಾಗಿದೆ.

ಹಾಗೆಯೇ ಇನ್ನೋರ್ವ ಅಪರಾಧಿಗೆ ಮೂರು ತಿಂಗಳ ಜೈಲು ಮತ್ತು ಗಡಿಪಾರು ಶಿಕ್ಷೆಯನ್ನು ವಿಧಿಸಲಾಗಿದೆ.
ಈ ಇಬ್ಬರು ಕಜಕಿಸ್ತಾನ್ ರಾಷ್ಟ್ರದವರು. ಕಳೆದ ವರ್ಷದ ಜನವರಿಯಲ್ಲಿ ಅಲ್ಬರ್ಷ ಪೊಲೀಸ್ ಠಾಣೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಈ ಕ್ರಮ ಕೈಗೊಳ್ಳಲಾಗಿದೆ. ದುಬೈ ಗ್ಲೋಬಲ್ ವಿಲೇಜ್ ನ ಹೊರಗಡೆ ಟ್ಯಾಕ್ಸಿ ಡ್ರೈವರ್ ಗಳ ಜೊತೆ ವಾಗ್ವಾದ ನಡೆಸಿದ್ದ ವೇಳೆ ಇವರನ್ನು ವಿಚಾರಿಸುವುದಕ್ಕಾಗಿ ಪೊಲೀಸರು ಠಾಣೆಗೆ ಕೊಂಡು ಹೋಗಿದ್ದರು. ಸ್ಟೇಷನ್ನಲ್ಲಿ ವಿಚಾರಣೆ ನಡೆಸುತ್ತಿರುವ ವೇಳೆ ಯುವತಿ ವಿಡಿಯೋ ಮಾಡಿದ್ದಾಳೆ.

ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮೊಬೈಲ್ ಕೊಡುವಂತೆ ಕೇಳಿದರೂ ಯುವತಿ ನೀಡಲಿಲ್ಲ. ಆ ಕಾರಣದಿಂದ ಉನ್ನತ ಅಧಿಕಾರಿಗೆ ಅವರು ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಪೊಲೀಸರು ಬಂದು ಆಕೆಯಿಂದ ಮೊಬೈಲ್ ಪಡೆದುಕೊಳ್ಳಲು ಯತ್ನಿಸಿದರು. ಆ ಸಂದರ್ಭದಲ್ಲಿ ಆಕೆಯ ಗೆಳೆಯರು ಮತ್ತು ಪೊಲೀಸರ ಮೇಲೆ ಗೆಳೆಯ ಆಕ್ರಮಣ ನಡೆಸಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು. ಪೊಲೀಸರ ವರ್ತನೆಯನ್ನು ದಾಖರಿಸುವುದಕ್ಕಾಗಿ ಮಾತ್ರ ತಾನು ವಿಡಿಯೋ ಮಾಡಿದ್ದೇನೆ ಎಂದು ಇವರು ವಾದಿಸಿದರು. ಆದರೆ ನ್ಯಾಯಾಲಯ ಅದನ್ನು ಮನ್ನಿಸಲಿಲ್ಲ ಬಳಿಕ ವಿಡಿಯೋ ಮಾಡಿದ ಯುವತಿಗೆ 2000 ದಿರ್ಹಮ್ ದಂಡವನ್ನು ನ್ಯಾಯಾಲಯ ವಿಧಿಸಿತಲ್ಲದೆ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಆಕೆಯ ಗೆಳೆಯನಿಗೆ ಮೂರು ತಿಂಗಳ ಜೈಲು ಮತ್ತು ಗಡಿಪಾರು ಶಿಕ್ಷೆಯನ್ನ ವಿಧಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ