ಇಸ್ರೇಲ್ ಜೈಲಲ್ಲಿ ನರಕಯಾತನೆ: ನೋವು ಹಂಚಿಕೊಂಡ ಫೆಲೆಸ್ತೀನಿ ಕೈದಿಗಳು
ಇಸ್ರೇಲ್ ಜೈಲಲ್ಲಿ ತೀವ್ರವಾದ ಹಿಂಸೆ ಮತ್ತು ಹಸಿವನ್ನು ಅನುಭವಿಸಿರುವ ಬಗ್ಗೆ ಇದೀಗ ಬಿಡುಗಡೆಗೊಂಡಿರುವ ಫೆಲೆಸ್ತೀನಿ ಕೈದಿಗಳು ಮಾಧ್ಯಮಗಳ ಜೊತೆ ನೋವು ಹಂಚಿಕೊಂಡಿದ್ದಾರೆ. ಕದನ ವಿರಾಮ ಒಪ್ಪಂದದಂತೆ 183 ಮಂದಿ ಫೆಲೆಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಿದೆ.
ಮಾಸಿದ ಬಟ್ಟೆ ಧರಿಸಿದ್ದ ಇವರು ತಿಂಗಳುಗಳಿಂದ ಹಿಂಸೆಯನ್ನು ಅನುಭವಿಸಿ ದುರ್ಬಲರಾಗಿದ್ದರು. 15 ತಿಂಗಳ ಕಾಲ ಅಮಾನವೀಯತೆಯಿಂದ ಇಸ್ರೇಲ್ ಯೋಧರು ಇವರನ್ನು ನಡೆಸಿಕೊಂಡಿದ್ದರು. ಮೃಗಗಳಿಂತಲೂ ಕಡೆಯಾಗಿ ನಮ್ಮನ್ನು ಅವರು ನಡೆಸಿಕೊಂಡು ಎಂದು ಕೈದಿಗಳು ಹೇಳಿದ್ದಾರೆ.
ಹಾಗೆಯೇ ಆರೋಗ್ಯ ಸಮಸ್ಯೆಯನ್ನು ಎದುರಿಸಿದ ಕೈದಿಗಳಿಗೆ ಸರಿಯಾದ ಚಿಕಿತ್ಸೆಯನ್ನೂ ಇಸ್ರೇಲ್ ಕೊಡಲಿಲ್ಲ. ಅನೇಕರು ಚರ್ಮರೋಗಕ್ಕೆ ತುತ್ತಾಗಿದ್ದಾರೆ. ಅಲ್ಲದೆ ಜೈಲಿನಲ್ಲಿ ದೌರ್ಜನ್ಯ ನಡೆಸಿರುವುದರ ಕಾರಣದಿಂದ ಹಲವಾರು ಕೈದಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj