ಪೊಲೀಸರೊಂದಿಗೆ ಹಿಂದೂ ಪರ ಸಂಘಟನೆಗಳ ಘರ್ಷಣೆ: ಮಧುರೈನಲ್ಲಿ 144 ಸೆಕ್ಷನ್ ಜಾರಿ - Mahanayaka

ಪೊಲೀಸರೊಂದಿಗೆ ಹಿಂದೂ ಪರ ಸಂಘಟನೆಗಳ ಘರ್ಷಣೆ: ಮಧುರೈನಲ್ಲಿ 144 ಸೆಕ್ಷನ್ ಜಾರಿ

04/02/2025

ತಿರುಪರಂಕುಂದ್ರಂ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಬೆಟ್ಟ ವಿವಾದಕ್ಕೆ ಸಂಬಂಧಿಸಿ ಪ್ರತಿಭಟನೆ‌ ನಡೆಯುತ್ತಿದ್ದು ಇದೇ ವೇಳೆ ಮುಂಜಾಗ್ರತ ಕ್ರಮವಾಗಿ ಸರ್ಕಾರ ಈ ಪ್ರದೇಶದಾದ್ಯಂತ ಸೆಕ್ಷನ್ 144 ವಿಧಿಸಿದೆ.

ಇದಾದ ನಂತರ ತಮಿಳುನಾಡಿನ ಮಧುರೈ ಜಿಲ್ಲೆ ಮಂಗಳವಾರ ಹೆಚ್ಚಿನ ಭದ್ರತೆಗೆ ಸಾಕ್ಷಿಯಾಗಿದೆ. ಹಿಂದೂ ವಿರೋಧಿ ಗುಂಪುಗಳು ಮತ್ತು ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಯೋಜಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ತಿರುಪರಂಕುಂದ್ರಂ ಬೆಟ್ಟದಲ್ಲಿ ಕೆಲವರು ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿರುವ ವೀಡಿಯೋ ವೈರಲ್ ಆದ ನಂತರ ಈ ವಿವಾದವು ಹುಟ್ಟಿಕೊಂಡಿದೆ. ಇದು ಹಿಂದೂ ಪರ ಗುಂಪುಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಅನುಮತಿ ನಿರಾಕರಿಸಿದರೂ ಹಿಂದೂ ಮುನ್ನಾನಿ ಸುಬ್ರಮಣ್ಯ ಸ್ವಾಮಿ ದೇವಾಲಯದ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಬೆಟ್ಟದಲ್ಲಿ ದರ್ಗಾವೂ ಇದೆ. ಹೀಗಾಗಿ ಮುಸ್ಲಿಮರ ಒಂದು ವಿಭಾಗವು ತಿರುಪರಂಕುಂಡ್ರಮ್ ಬೆಟ್ಟಗಳನ್ನು ಸಿಕಂದರ್ ಮಲೈ ಎಂದು ಮರುನಾಮಕರಣ ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳವಳಗಳನ್ನು ಉಲ್ಲೇಖಿಸಿ ಅಧಿಕಾರಿಗಳು ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ. ಮಧುರೈನಾದ್ಯಂತ ಸಭೆಗಳನ್ನು ನಿರ್ಬಂಧಿಸಲಾಗಿದೆ. ಪೊಲೀಸರು ಬೆಟ್ಟದ ಪ್ರವೇಶದ್ವಾರಕ್ಕೆ ಬ್ಯಾರಿಕೇಡ್ ಹಾಕಿ, ದೇವಾಲಯ ಮತ್ತು ದರ್ಗಾ ಎರಡರಲ್ಲೂ ಭಕ್ತರ ದರ್ಶನವನ್ನು ತಡೆದರು. ಥೇಣಿ ಜಿಲ್ಲಾ ಗಡಿಯ ಬಳಿಯ ಆಂಡಿಪಟ್ಟಿ ಕನವೈ, ಉಸಿಲಂಪಟ್ಟಿ ಥೇವರ್ ಪ್ರತಿಮೆ ಪ್ರದೇಶ, ದಿಂಡಿಗಲ್ ಜಿಲ್ಲಾ ಗಡಿಯ ಬಳಿಯ ಉತ್ತಪ್ಪನಾಯಕನೂರು ಮತ್ತು ಎಲುಮಲೈ ಜಂಕ್ಷನ್ ಸೇರಿದಂತೆ ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ಕಠಿಣ ವಾಹನ ತಪಾಸಣೆ ನಡೆಸಲಾಗುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ