ಶ್ರೀರಾಮನನ್ನು ಹೊಗಳಿ ಕವನ ಬರೆದ ಮುಸ್ಲಿಂ ಸಾಹಿತಿ: 'ಭೇಷ್ ಭೇಷ್' ಎಂದ ಪ್ರಧಾನಿ ಮೋದಿ - Mahanayaka
10:25 PM Tuesday 4 - February 2025

ಶ್ರೀರಾಮನನ್ನು ಹೊಗಳಿ ಕವನ ಬರೆದ ಮುಸ್ಲಿಂ ಸಾಹಿತಿ: ‘ಭೇಷ್ ಭೇಷ್’ ಎಂದ ಪ್ರಧಾನಿ ಮೋದಿ

04/02/2025

ಶ್ರೀರಾಮನನ್ನು ಹೊಗಳಿ ಕವನವನ್ನು ರಚಿಸಿದ ಮಧ್ಯಪ್ರದೇಶದ ಮುಸ್ಲಿಂ ಸಾಹಿತಿ ಅಂಜುಮ್ ಬರಬಾಂಕ್ವಿ ಅವರನ್ನು ಮೆಚ್ಚಿಕೊಂಡು ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದಾರೆ ಭಾರತದ ಸಂಪತ್ ಭರಿತ ಪರಂಪರೆಗೆ ಹೆಮ್ಮೆಪಡುತ್ತಾ ನಾವು ಈ ದೇಶವನ್ನು ಕಟ್ಟಬೇಕಾಗಿದೆ. ನಿಮ್ಮಂತಹವರ ಪ್ರಯತ್ನವು ಈ ದೇಶವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ ಎಂದು ಪ್ರಧಾನಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ತನ್ನ ಬಾಲ್ಯ ಕಾಲದಿಂದಲೇ ಶ್ರೀರಾಮ ನನಗೆ ಪ್ರೇರಣೆಯಾಗಿದ್ದಾರೆ ಎಂದು ಅಂಜುಮ್ ಹೇಳಿದ್ದಾರೆ. ಅದೇ ವೇಳೆ ಸಮುದಾಯದಿಂದ ವಿರೋಧ ವ್ಯಕ್ತವಾಗಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ವಿರುದ್ಧ ಪತ್ವ ಹೊರಡಿಸಿದರೂ ತಾನು ಲೆಕ್ಕಿಸುವುದಿಲ್ಲ ಎಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ