ಗಾಝಾದ ಪುನರ್ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ತಾನು ಸಿದ್ಧ: ಅಮೆರಿಕ ಭರವಸೆ - Mahanayaka
8:19 PM Wednesday 5 - February 2025

ಗಾಝಾದ ಪುನರ್ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ತಾನು ಸಿದ್ಧ: ಅಮೆರಿಕ ಭರವಸೆ

05/02/2025

ಗಾಝಾದ ಪುನರ್ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ತಾನು ಸಿದ್ಧ ಎಂದು ಅಮೆರಿಕ ಹೇಳಿದೆ. ವೈಟ್ ಹೌಸ್ ನಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಜೊತೆ ನಡೆಸಿದ ಮಾತುಕತೆಯ ಬಳಿಕ ಅಧ್ಯಕ್ಷ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಯುದ್ಧದಿಂದಾಗಿ ನಾಶವಾದ ಗಾಝಾವನ್ನು ಪಡೆದುಕೊಳ್ಳಲು ನಾವು ಸಿದ್ಧರಿದ್ದೇವೆ.

ಗಾಝಾದ ಜನರನ್ನು ಇನ್ನಾವುದಾದರೂ ಪ್ರದೇಶದಲ್ಲಿ ನಾವು ನೆಲೆಗೊಳಿಸುತ್ತೇವೆ. ಅಲ್ಲಿ ಉಳಿದಿರಬಹುದಾದ ಬಾಂಬುಗಳನ್ನು ನಾವು ನಿಷ್ಕ್ರಿಯಗೊಳಿಸುತ್ತೇವೆ. ಉದ್ಯೋಗ ಮತ್ತು ಹೊಸ ಮನೆಗಳನ್ನು ನಿರ್ಮಿಸುತ್ತೇವೆ. ಗಾಝಾವನ್ನು ಸುಖಮಯ ಕೇಂದ್ರವಾಗಿ ಮಾರ್ಪಡಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

ಅಗತ್ಯಬಿದ್ದರೆ ಗಾಝಾದ ನೆರವಿಗಾಗಿ ತನ್ನ ಸೇನೆಯನ್ನು ನಿಯೋಜಿಸಲು ಅಮೆರಿಕ ಸಿದ್ಧ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಕದನ ವಿರಾಮ ಒಪ್ಪಂದದ ಎರಡನೇ ಘಟ್ಟದ ಕುರಿತಂತೆ ಮಾತುಕತೆಗಳು ಪ್ರಾರಂಭವಾಗಿವೆ ಎಂದು ಹಮಾಸ್ ಹೇಳಿದೆ. ಮೊದಲ ಹಂತದಲ್ಲಿ ಕೈದಿಗಳ ವಿನಿಮಯ ನಡೆದಿದ್ದು ದ್ವಿತೀಯ ಹಂತದಲ್ಲಿ ಈ ಕುರಿತಂತೆ ಇನ್ನಷ್ಟು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವರದಿಗಳು ತಿಳಿಸಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ