ಅಬುದಾಬಿಯಲ್ಲಿ ಉದ್ಯೋಗ ಅವಕಾಶ: ನೂರಕ್ಕಿಂತಲೂ ಅಧಿಕ ಪುರುಷ ನರ್ಸ್ ಗಳ ನೇಮಕ - Mahanayaka
11:40 PM Thursday 6 - February 2025

ಅಬುದಾಬಿಯಲ್ಲಿ ಉದ್ಯೋಗ ಅವಕಾಶ: ನೂರಕ್ಕಿಂತಲೂ ಅಧಿಕ ಪುರುಷ ನರ್ಸ್ ಗಳ ನೇಮಕ

06/02/2025

ನೂರ್ಕಾ ರೂಟ್ಸ್ ನ ಅಧೀನದಲ್ಲಿ ಅಬುದಾಬಿಯ ಖಾಸಗಿ ಕಂಪನಿಯು ನೂರಕ್ಕಿಂತಲೂ ಅಧಿಕ ಪುರುಷ ನರ್ಸ್ ಗಳ ನೇಮಕಕ್ಕೆ ಮುಂದಾಗಿದೆ. ನರ್ಸಿಂಗ್ ಬಿಎಸ್ಸಿ,ಪೋಸ್ಟ್ ಬಿ ಎಸ್ ಸಿ ವಿದ್ಯಾರ್ಹತೆ ಹೊಂದಿರುವ ಮತ್ತು ಎಮರ್ಜೆನ್ಸಿ, ಕ್ಯಾಜುವಾಲಿಟಿ ಅಥವಾ ಐಸಿಯು ಸ್ಪೆಷಲಿಸ್ಟ್ ನಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಇರುವವರು ಈ ನೇಮಕಕ್ಕೆ ಅರ್ಹರಾಗಿದ್ದಾರೆ.

ಹಾಗೆಯೇ ಬಿ ಎಲ್ ಎಸ್, ಎ ಸಿ ಎಲ್ ಎಸ್ ಮೆಡಿಕಲ್ ನರ್ಸಿಂಗ್ ಪ್ರಾಕ್ಟಿಸ್ ನ ಅರ್ಹತೆಯೂ ಇರಬೇಕಾಗಿದೆ. ಶೈಕ್ಷಣಿಕ ವಿವರ, ವೃತ್ತಿ ಪರಿಚಯ, ಪಾಸ್ಪೋರ್ಟ್ ಇತ್ಯಾದಿಗಳ ಪ್ರತಿಗಳೊಂದಿಗೆ www.norkaroots.org ಅಥವಾ www.nifl.norkaroots.org ಎಂಬ ವೆಬ್ ಸೈಟ್ ಗಳಿಗೆ ಭೇಟಿ ನೀಡಿ 2025 ಫೆಬ್ರವರಿ 18ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ನೋರ್ಕಾ ರೂಟ್ಸ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅಜಿತ್ ಕೊಲಶೇರಿ ತಿಳಿಸಿದ್ದಾರೆ.

ಅಬುದಾಬಿ ಆರೋಗ್ಯ ಇಲಾಖೆಯ ಮೆಡಿಕಲ್ ಪ್ರಾಕ್ಟಿಸಿಂಗ್ ಲೈಸೆನ್ಸ್ ಇದ್ದವರಿಗೆ ನೇಮಕದಲ್ಲಿ ಆದ್ಯತೆ ನೀಡಲಾಗುವುದು. ಉಳಿದವರು ಪ್ರಸ್ತಾವನೆ ಜಾರಿಯಾದ 90 ದಿನಗಳಲ್ಲಿ ಆ ಅರ್ಹತೆಯನ್ನು ಪಡೆಯಬೇಕಾಗಿದೆ. ಆಯ್ಕೆಯಾದವರಿಗೆ 5,000 ದಿರ್ ಹಂ ವೇತನ, ಶೇರ್ಡ್ ಬ್ಯಾಚುಲರ್ ವಾಸ, ಅಥವಾ ಅಡುಗೆ ಮಾಡುವುದಕ್ಕೆ ಬೇಕಾದ ಸೌಲಭ್ಯ, ಆರೋಗ್ಯ ಇನ್ಶೂರೆನ್ಸ್, ರಜಾ ಸೌಲಭ್ಯಗಳು ಎರಡು ವರ್ಷಗಳಿಗೊಮ್ಮೆ ಊರಿಗೆ ಮರಳುದಕ್ಕೆ ಅವಕಾಶ ಇತ್ಯಾದಿಗಳು ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 24 ಗಂಟೆ ಚಟುವಟಿಕೆಯಲ್ಲಿರುವ ನೋರ್ಕಾ ಗ್ಲೋಬಲ್ ಕಾಂಟಾಕ್ಟ್ ಸೆಂಟರ್ ನ ಟೋಲ್ ಫ್ರೀ ನಂಬರ್ ಆಗಿರುವ 18004253939 ಗೆ ಭಾರತದಿಂದ ಮತ್ತು +918802012345 ವಿದೇಶದಿಂದಲೂ ಕರೆ ಮಾಡಬಹುದಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ