ದೆಹಲಿ ಫಲಿತಾಂಶ: ಅಮಾನತುಲ್ಲಾ ಖಾನ್ ರ ಓಖ್ಲಾ ಮುಸ್ಲಿಂ ಭದ್ರಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
ಎಎಪಿಯ ಹಿರಿಯ ನಾಯಕ ಮತ್ತು ಎರಡು ಬಾರಿ ಶಾಸಕರಾಗಿರುವ ಅಮನತುಲ್ಲಾ ಖಾನ್ ಅವರು ತಮ್ಮ ಓಖ್ಲಾ ಭದ್ರಕೋಟೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ಮನೀಶ್ ಚೌಧರಿ ಅವರು ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹಲವಾರು ಸುತ್ತಿನ ಮತ ಎಣಿಕೆ ಬಾಕಿ ಉಳಿದಿದ್ದರೂ, ಮುಸ್ಲಿಂ ಬಹುಸಂಖ್ಯಾತ ಓಖ್ಲಾದಲ್ಲಿ ಎಎಪಿಯ ಮತ ಹಂಚಿಕೆಯಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಮನೀಶ್ ಚೌಧರಿ ಚುನಾವಣೆಯಲ್ಲಿ ಗೆದ್ದರೆ, 1993 ರ ನಂತರ ಮೊದಲ ಬಾರಿಗೆ ಮುಸ್ಲಿಮೇತರರೊಬ್ಬರು ಆಗ್ನೇಯ ದೆಹಲಿ ಕ್ಷೇತ್ರದ ಶಾಸಕರಾಗಲಿದ್ದಾರೆ. ಓಖ್ಲಾ ಕ್ಷೇತ್ರದಲ್ಲಿ ಸುಮಾರು 60% ಮುಸ್ಲಿಂ ಜನಸಂಖ್ಯೆ ಇದೆ.
ಅಮನತುಲ್ಲಾ ಖಾನ್ ಅವರಲ್ಲದೆ, ಚೌಧರಿ ಅವರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನ ಶಿಫಾ ಉರ್ ರೆಹಮಾನ್ ಮತ್ತು ಕಾಂಗ್ರೆಸ್ನ ಅರಿಬಾ ಖಾನ್ ವಿರುದ್ಧ ಸ್ಪರ್ಧಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj