ಕೊರಗಜ್ಜನ ಹುಂಡಿಗೆ ಕಾಂಡಮ್ ಹಾಕಿದವರ ಪರಿಸ್ಥಿತಿ ಏನಾಗಿದೆ ಗೊತ್ತಾ? | ಮೂಲನಿವಾಸಿ ಕೊರಗಜ್ಜ ತರ್ಕಕ್ಕೆ ನಿಲುಕದ ದೈವ - Mahanayaka

ಕೊರಗಜ್ಜನ ಹುಂಡಿಗೆ ಕಾಂಡಮ್ ಹಾಕಿದವರ ಪರಿಸ್ಥಿತಿ ಏನಾಗಿದೆ ಗೊತ್ತಾ? | ಮೂಲನಿವಾಸಿ ಕೊರಗಜ್ಜ ತರ್ಕಕ್ಕೆ ನಿಲುಕದ ದೈವ

koragajja
01/04/2021

ಮಂಗಳೂರು: ಹಿಂದೂ ಆಗಲಿ, ಮುಸಲ್ಮಾನನಾಗಲಿ, ಕ್ರೈಸ್ತನಾಗಲಿ, ಬೌದ್ಧನಾಗಲಿ ಪ್ರತಿಯೊಬ್ಬನಿಗೂ ಅವನದ್ದೇ ಆದ ಧಾರ್ಮಿಕ ಭಾವನೆಗಳಿವೆ. ಆದರೆ ಕೆಲವರು ತಾನು ಇಂತಹ ಧರ್ಮದಲ್ಲಿ ಹುಟ್ಟಿರುವುದರಿಂದಾಗಿ ಬೇರೆ ಧರ್ಮದವರನ್ನು ವಿರೋಧಿಸಬೇಕು ಎಂದು ಅಂದುಕೊಳ್ಳುತ್ತಾರೆ.

ಕರಾವಳಿ ಭಾಗದಲ್ಲಿ ಆರಾಧಿಸುವ ಸ್ವಾಮಿ ಕೊರಗಜ್ಜ ಎನ್ನುವ ಮೂಲ ನಿವಾಸಿ ದೈವದ ಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿರುವ ಘಟನೆ ಕಳೆದ ಹಲವು ಸಮಯಗಳಿಂದಲೂ ನಡೆಯುತ್ತಲೇ ಇತ್ತು. ಆದರೆ ಕೊರಗಜ್ಜನ ಸನ್ನಿಧಾನದಲ್ಲಿ  ಯಾವಾಗಲೂ ವಿಜ್ಞಾನವನ್ನೇ ಮೀರಿಸುವ ಘಟನೆಗಳು ನಡೆಯುತ್ತವೆ. ಅಂತಹದ್ದೇ ಒಂದು ಘಟನೆ ಇದೀಗ ಕರಾವಳಿಯಲ್ಲಿ ಮತ್ತೆ ನಡೆದಿದೆ.

 ಕಳೆದ ಮೂರು ತಿಂಗಳಲ್ಲಿ ನಗರದ ಪಾಂಡೇಶ್ವರ, ಉಳ್ಳಾಲ ಮತ್ತು ಕದ್ರಿ ಪೊಲೀಸ್‌ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳು ಒಂದೇ ರೀತಿಯಾಗಿದ್ದವು. ಕೊರಗಜ್ಜನ ಕಾಣಿಕೆ ಡಬ್ಬಿಯಲ್ಲಿ ಕಾಂಡಮ್ ಹಾಕಿ, ಅಶ್ಲೀಲ ಬರಹಗಳನ್ನು ಬರೆದ ಪತ್ರವನ್ನು ಡಬ್ಬಿಯೊಳಗೆ ಹಾಕಲಾಗಿತ್ತು. ಈ ಬಗ್ಗೆ ಮಹಾನಾಯಕ ಡಾಟ್ ಇನ್ ಮಾಧ್ಯಮದಲ್ಲಿ ಕೂಡ ವರದಿ ಪ್ರಕಟವಾಗಿತ್ತು. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಕಾಡಿತ್ತು.

ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ  ನಿರಂತರವಾಗಿ ಶೋಧ ಆರಂಭಿಸಿದ್ದರು. ಆದರೆ ಇನ್ನೊಂದೆಡೆ ಈ ಕುಕೃತ್ಯ ಎಸಗಿದ ಆರೋಪಿಗಳಿಗೆ ಏಕಾಏಕಿ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗಿದೆ.  ಆರೋಗ್ಯವಂತನಾಗಿದ್ದ ಆರೋಪಿ ಏಕಾಏಕಿ ಅನಾರೋಗ್ಯಕ್ಕೀಡಾಗಿ ಸಾವಿನ ಸನಿಹದಲ್ಲಿ ಬಂದು ನಿಂತಾಗಲೇ ತಾನು ಮಾಡಿದ ತಪ್ಪು ಆತನಿಗೆ ಅರಿವಾಗಿದೆ. ಆಗಲೇ ಆತ ಕೊರಗಜ್ಜನ ಸನ್ನಿಧಾನಕ್ಕೆ ತಲೆಬಾಗಿ ಬಂದಿದ್ದಾನೆ.

ಹೌದು…! ಯಾವುದೋ ರಾಜಕೀಯ ಪಕ್ಷದವರನ್ನು ವಿರೋಧಿಸುವ ಭರದಲ್ಲಿ ತುಳುನಾಡಿನ ಇತಿಹಾಸವೇ ತಿಳಿಯದ ಮೂಢ ಯುವಕರು ಈ ಕುಕೃತ್ಯ ಎಸಗಿದ್ದರು. ಈ ಕೃತ್ಯ ಎಸಗಿದ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿ ಜೋಕಟ್ಟೆ ಮೂಲದ ನವಾಝ್ ಎಂಬಾತ ತೀವ್ರವಾದ ಅನಾರೋಗ್ಯಕ್ಕೊಳಗಾಗಿದ್ದು, ಯಾರೂ ಊಹಿಸಲು ಕೂಡ ಸಾಧ್ಯವಾಗದಂತೆ ಆತ ಮೃತಪಟ್ಟಿದ್ದ. ಈತ ಮೃತಪಟ್ಟ ಬಳಿಕ ಇನ್ನೋರ್ವ ಆರೋಪಿ  ತೌಫೀಕ್ ಗೆ ಕೂಡ ನಿಧಾನವಾಗಿ ಅನಾರೋಗ್ಯ ಕಾಡಿದೆ.

ನವಾಝ್ ಮೃತಪಟ್ಟಾಗಲೇ ಕೊರಗಜ್ಜನ ಮಹಿಮೆ ಇದು ಎಂದು ಭಯಭೀತರಾಗಿದ್ದ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ತೌಫಿಕ್ ಹಾಗೂ ರಹೀಂಗೆ ಜೀವ ಭಯ ಆರಂಭವಾಗಿದೆ. ತಮ್ಮ ಜೊತೆಗೆ ಕುಕೃತ್ಯ ನಡೆಸಿದ ನವಾಝ್ ನ ಸಾವು ಅವರ ಕಣ್ಣ ಮುಂದೆ ಇರುವಾಗಲೇ ತೌಫಿಕ್ ಗೂ ವಿಚಿತ್ರವಾದ ಅನಾರೋಗ್ಯ ಕಾಡಿದೆ. ಇದರಿಂದಾಗಿ ಅವರು ಕೊರಗಜ್ಜನ ಶಕ್ತಿ ಏನು ಎನ್ನುವುದನ್ನು  ಆಗಲೇ ತಿಳಿದುಕೊಂಡಿದ್ದು, ತಕ್ಷಣವೇ ಸ್ವತಃ ಎಮ್ಮೆಕೆರೆಯಲ್ಲಿ ನಡೆಯುತ್ತಿರುವ ನೇಮೋತ್ಸವ (ದೈವ ದರ್ಶನ)ಕ್ಕೆ ಬಂದು ತಪ್ಪೊಪ್ಪಿಗೆ ನೀಡಿದ್ದಾರೆ. ಇದೀಗ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮೂಲನಿವಾಸಿಗಳ ಆಚರಣೆಯಾದ ದೈವಾರಾಧನೆ ಬಹಳ ಶಕ್ತಿಯುತವಾಗಿರುವಂತಹದ್ದು, ದೇವಸ್ಥಾನಗಳ ಜೊತೆಗೆ ಬೇಕಾದರೂ ಯಾರಾದರೂ ಆಟವಾಡಬಹುದು ಆದರೆ ದೈವಗಳ ಜೊತೆಗೆ ಆಟವಾಡುವುದು ಬೇಡ ಎಂಬ ಮಾತುಗಳು ಕರಾವಳಿಯಲ್ಲಿ ಸಾಮಾನ್ಯವಾಗಿ ಕೇಳಿ ಬರುವಂತಹದ್ದು. ಇದೀಗ ಹುಡುಗಾಟಿಕೆಗೆ ಮಾಡಿದ ಕುಕೃತ್ಯಕ್ಕೆ ಒಂದು ಜೀವವೇ ಬಲಿಯಾಗಿದೆ ಎನ್ನುವ ಮಾತುಗಳು ಕರಾವಳಿಯಲ್ಲಿ ಕೇಳಿ ಬಂದಿದೆ.

ಈ ಘಟನೆಗೂ ಮುನ್ನ ಮಹಾನಾಯಕ ಮಾಧ್ಯ ಪ್ರಕಟಿಸಿರುವ ವರದಿ ಓದಲು ಕ್ಲಿಕ್ ಮಾಡಿ

ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಕಿಡಿಗೇಡಿಗಳು | ಸಾಮಾಜಿಕ ಸಾಮರಸ್ಯ ಕದಡಲು ಯತ್ನ

ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್, ಅವಹೇಳನಾಕಾರಿ ಪತ್ರ ಪತ್ತೆ!

ಇತ್ತೀಚಿನ ಸುದ್ದಿ