KPSC ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ನಿಯಮ : ಪಾಲಿಸುವುದು ಕಡ್ಡಾಯ - Mahanayaka
1:35 PM Saturday 8 - February 2025

KPSC ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ನಿಯಮ : ಪಾಲಿಸುವುದು ಕಡ್ಡಾಯ

kpsc
08/02/2025

KPSC New Rules for All aspirants : ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು ನಡೆಸುತ್ತಿರುವ ಹಲವು ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವು ಲೋಪ ದೋಷಗಳು ಹಾಗೂ ಹಲವು ರೀತಿಯಲ್ಲಿ ಅಕ್ರಮ ನಡೆಯುತ್ತಿರುವುದು ಸಾಮಾನ್ಯವಾಗುತ್ತಿದ್ದು, ಬಡವರ ಮಕ್ಕಳ ಬೆನ್ನಿಗೆ ಚೂರಿ ಹಾಕುತ್ತಿದ್ದಂತೆ ಕಾಣುತ್ತಿದೆ.

ಏಕೆಂದರೆ ಕಳೆದ ಮೊದಲನೇ ಬಾರಿ ನಡೆಸಿದ KAS ಎಕ್ಸಾಮ್ ನಲ್ಲಿ ಆದಂತಹ ಕನ್ನಡ ಭಾಷೆ ಅನುವಾದದ ಸಲುವಾಗಿ ಎರಡನೇ ಬಾರಿ ಡಿಸೆಂಬರ್ ತಿಂಗಳಿನಲ್ಲಿ ಮರುಪರೀಕ್ಷೆ ನಡೆಸಿತು. ಆದರೂ ಸಹ ಮತ್ತೆ ಅದೇ ತಪ್ಪನ್ನು ಮಾಡಿ ತನ್ನ ದಡ್ಡತನ ಮತ್ತು ಅಲಕ್ಷ್ಯತನವನ್ನು KPSC ಎತ್ತಿ ಹಿಡಿಯುತ್ತಿದೆ.

ವಾಣಿಜ್ಯ ತೆರಿಗೆ ವೀಕ್ಷಕರು ಹುದ್ದೆಗಳ ನೇಮಕಾತಿ ಪರೀಕ್ಷೆ ಮುಗಿದು, ಒಂದು ವರ್ಷ ಕಳೆದರು ಇನ್ನೂ ಬಾರದ ಫೈನಲ್ ಲಿಸ್ಟ್ :

ಹೌದು, ವಾಣಿಜ್ಯ ತೆರಿಗೆ ವೀಕ್ಷಕರರು ಹುದ್ದೆಗಳ ನೇಮಕಾತಿ ಸೇರಿದಂತೆ ಹಲವು ನೇಮಕಾತಿಗಳ ಪರೀಕ್ಷೆ ಮುಗಿದು, 1:3 ಲಿಸ್ಟ್ ನ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆದು ಹಲವು ದಿನಗಳು ಕಳೆದರು ಕೂಡ ಇನ್ನೂ ಫೈನಲ್ ಆಯ್ಕೆ ಪಟ್ಟಿಯನ್ನು ಬಿಡದಿರುವುದು ಅಭ್ಯರ್ಥಿಗಳ ನೋವಿಗೆ ಕಾರಣವಾಗಿದೆ.

ಮತ್ತೊಂದು ಮುಖ್ಯ ವಿಚಾರವೇನೆಂದರೆ KPSC ಕೇವಲ ಅಭ್ಯರ್ಥಿಗಳ ಹೆಸರಿನ ಲಿಸ್ಟ್ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ಅಂಕಗಳನ್ನು ಬಹಿರಂಗ ಪಡಿಸದೆ ಇರುವುದು ಸಂಶಯಕ್ಕೆ ಕಾರಣವಾಗಿದೆ. ಈ ಎಲ್ಲಾ ಲೋಪ ದೋಷಗಳನ್ನು ಸರಿ ಪಡಿಸಿಕೊಳ್ಳುವುದು ಇನ್ನೂ ಎಲ್ಲಿಯ ತನಕವೆಂದು ಕಾದು ನೋಡಬೇಕು.

ಇದೀಗ ಹೊಸ ನಿಯಮ ಒಂದನ್ನು ಕರ್ನಾಟಕ ಲೋಕ ಸೇವಾ ಆಯೋಗ ಬಿಡುಗಡೆ ಮಾಡಿದ್ದು, ಇದು ಯಾವ ಕಾರಣಕ್ಕಾಗಿ ಎಂದು ಗೊತ್ತಾಗುತ್ತಿಲ್ಲ.. ಅದೇನೆಂದರೆ, ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಪ್ಪು ಬಾಲ್ ಪೆನ್ ಬಳಸಲು ಸೂಚಿಸಿತ್ತು. ಆದರೆ ಈಗ ಹೊಸ ಸೂಚನೆಯ ಪ್ರಕಾರ ಮುಂದಿನ  KPSC ನಡೆಸುವ ಎಲ್ಲಾ ಪರೀಕ್ಷೆಗಳಿಗೆ ನೀಲಿ ಬಣ್ಣದ ಬಾಲ್ ಪೆನ್ ಬಳಸಬೇಕು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ