ಉದ್ಯೋಗ: ಪಂಜಾಬ್ & ಸಿಂಧ್ ಬ್ಯಾಂಕ್ ನಲ್ಲಿ ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗಳ ಭರ್ತಿ

Punjab & Sindh Bank, Local Bank officer’s Jobs : ಪದವಿ ಮುಗಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪಂಜಾಬ್ & ಸಿಂಧ್ ಬ್ಯಾಂಕ್ ನಲ್ಲಿ ವಲಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ಅವಕಾಶವಿದೆ.
ಈ ಬ್ಯಾಂಕ್ ನಲ್ಲಿ ಖಾಲಿ ಇರುವ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಸಂಪೂರ್ಣ ಅರ್ಹತೆಗಳ ಮಾಹಿತಿ ಹಾಗೂ ಹುದ್ದೆಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದ್ದು, ನಿರುದ್ಯೋಗಿಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಯಸುವವರು ಇದರ ಸದುಪಯೋಗ ಪಡೆಸಿಕೊಳ್ಳಿ.
ಎಷ್ಟು ಹುದ್ದೆಗಳು ಖಾಲಿ ಇವೆ?
ಈ ನೇಮಕಾತಿಯಲ್ಲಿ ಒಟ್ಟು 110 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವೆಲ್ಲಾ ಅರ್ಹತೆಗಳು ಇರಬೇಕು?
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಇರುವ ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿರಬೇಕು. ಇದರ ಜೊತೆಗೆ ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಿರೋ ಆ ರಾಜ್ಯದ ಭಾಷೆಯನ್ನು ಮಾತನಾಡಲು ಸಮರ್ಥರಿರಬೇಕು.
ವಯೋಮಿತಿ : ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಹಾಗೂ ಗರಿಷ್ಟ 30 ವರ್ಷದ ಒಳಗಿರಬೇಕು.
ರಾಜ್ಯವಾರು ಹುದ್ದೆಗಳ ವಿಂಗಡಣೆ :
Arunachal Pradesh English– 05
ಅಸ್ಸಾಂ — 10 ಹುದ್ದೆಗಳು
ಗುಜರಾತ್ — 30 ಹುದ್ದೆಗಳು
ಕರ್ನಾಟಕ — 10 ಹುದ್ದೆಗಳು
ಮಹಾರಾಷ್ಟ್ರ — 30 ಹುದ್ದೆಗಳು
ಪಂಜಾಬ್ — 25 ಹುದ್ದೆಗಳು
* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ದಿನಾಂಕ — 07 ಫೆಬ್ರವರಿ 2025
* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯ ದಿನಾಂಕ — 28 ಫೆಬ್ರವರಿ 2025
ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ : www.punjabandsindbank.co.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: