ಗಾಝಾವನ್ನು ಅಮೆರಿಕವು ರಿಯಲ್ ಎಸ್ಟೇಟ್ ಮಾಡುತ್ತದೆ: ಹಮಾಸ್ ತೀವ್ರ ವಿರೋಧ

ಗಾಝಾವನ್ನು ಅಮೆರಿಕಾ ವಶಪಡಿಸಿ ಕೊಳ್ಳುತ್ತದಲ್ಲದೆ ಅದನ್ನು ರಿಯಲ್ ಎಸ್ಟೇಟ್ ಆಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸುವ ಹೊಣೆಯನ್ನು ಮಧ್ಯೇಶಿಯಾದ ಇತರ ರಾಷ್ಟ್ರಗಳಿಗೆ ನೀಡುತ್ತದೆ ಎಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ನೀಡಿರುವ ಹೇಳಿಕೆಗೆ ಹಮಾಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅವರು ಅತ್ಯಂತ ಅಸಂಬದ್ಧವಾಗಿ ಮಾತಾಡ್ತಾ ಇದ್ದಾರೆ ಎಂದು ಹಮಾಸ್ ಪಾಲಿಟ್ ಬ್ಯುರೋ ಸದಸ್ಯರಾದ ಇಝಾತುಲ್ ರಿಶ್ಕ್ ಹೇಳಿದ್ದಾರೆ.
ಗಾಝಾ ಎಂಬುದು ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ರಿಯಲ್ ಎಸ್ಟೇಟ್ ಪ್ರಾಪರ್ಟಿ ಅಲ್ಲ. ಅದು ಫೆಲೆ ಸ್ತೀನಿನ ಅವಿಭಾಜ್ಯ ಅಂಗವಾಗಿದೆ. ಫೆಲಸ್ತೀನಿಯರು ಎಲ್ಲಿಗಾದರೂ ಹೋಗುವುದಾದರೆ ಅದು ಇಸ್ರೇಲ್ ಅತಿಕ್ರಮಿಸಿರುವ ಭೂಮಿಗೆ ಮಾತ್ರ ಮಾತ್ರ ಎಂದವರು ಹೇಳಿದ್ದಾರೆ.
ಗಾಝಾ ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ರಿಯಲ್ ಎಸ್ಟೇಟ್ ಭೂಮಿಯಲ್ಲ. ಅದು 1948ರಲ್ಲಿ ಅತಿಕ್ರಮಣ ವಾಗುವುದಕ್ಕಿಂತ ಮೊದಲೇ ಫೆಲಸ್ತೀನ್ ನ ಅವಿಭಾಜ್ಯ ಅಂಗವಾಗಿದೆ. ರಿಯಲ್ ಎಸ್ಟೇಟ್ ಮನಸ್ಥಿತಿಯೊಂದಿಗೆ ಫೆಲಸ್ತೀನಿ ನ ಸಮಸ್ಯೆಯನ್ನು ಪರಿಹರಿಸಲು ನೋಡುವುದು ಅಪಾಯಕಾರಿಯಾಗಿದೆ. ಇಂತಹ ಎಲ್ಲಾ ಪ್ರಯತ್ನವನ್ನು ಫೆಲಸ್ತೀನಿನ ಜನರು ಪರಾಜಯಗೊಳಿಸಲಿದ್ದಾರೆ. ಒಂದು ವೇಳೆ ಗಾಝಾದ ಮಂದಿ ಎಲ್ಲಿಗಾದರೂ ಹೋಗುವುದಿದ್ದರೆ ಅದು ಈ ಮೊದಲು ಇಸ್ರೇಲ್ ವಶಪಡಿಸಿಕೊಂಡ ಅವರ ಗ್ರಾಮಗಳಿಗೆ ಮತ್ತು ನಗರಗಳಿಗೆ ಮಾತ್ರವೇ ಆಗಿದೆ ಎಂದು ರಿಷ್ಕ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj