ಕಣ್ತಪ್ಪಿನಿಂದ ಲಗೇಜ್ ಅದಲು ಬದಲು: ನಿಮಿಷದಲ್ಲೇ ನೆರವು ನೀಡಿದ ದುಬೈ ಪೊಲೀಸರು

ಕಣ್ ತಪ್ಪಿನಿಂದ ಬೇರೆಯವರ ಲಗೇಜ್ ಅನ್ನು ಪಡೆದುಕೊಂಡ ಯಾತ್ರಿಕನಿಗೆ ನಿಮಿಷಗಳೊಳಗೆ ಆತನದ್ದೆ ಲಗೇಜ್ ಅನ್ನು ಪಡೆದುಕೊಳ್ಳುವುದಕ್ಕೆ ದುಬೈ ವಿಮಾನ ನಿಲ್ದಾಣದ ಪೊಲೀಸರು ನೆರವಾದ ವಿಶೇಷ ಘಟನೆ ನಡೆದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಈಜಿಪ್ಟ್ ನಾಗರಿಕ ಮುನೀರ್ ಜೈದ್ ಇಬ್ರಾಹಿಂ ಅವರ ಲಗೆಜ್ ಬೇರೆಯವರ ಪಾಲಾಗಿತ್ತು.
25000 ದಿರ್ ಹಂ ಮತ್ತು ದಾಖಲೆಗಳು ಆ ಬ್ಯಾಗನಲ್ಲಿತ್ತು. ವಿಷಯ ಗೊತ್ತಾದ ಕೂಡಲೇ ಈತ ಏರ್ಪೋರ್ಟ್ ಸೆಕ್ಯೂರಿಟಿ ವಿಭಾಗಕ್ಕೆ ಮಾಹಿತಿ ನೀಡಿದ್ದಾನೆ. ಅಲ್ಲಿಂದ ದುಬೈ ಪೋಲೀಸರಿಗೆ ಮಾಹಿತಿ ಹೋಗಿದೆ. ಆ ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರು ಅಂತದ್ದೇ ಬ್ಯಾಗನ್ನು ಈಜಿಪ್ಟಿನಿಂದ ಬಂದ ಇನ್ನೋರ್ವ ಮಹಿಳೆ ಕೊಂಡು ಹೋಗಿರುವುದನ್ನು ಪತ್ತೆಹಚ್ಚಿದ್ದಾರೆ. ತಕ್ಷಿಣ ಪೊಲೀಸರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಮತ್ತು ಆಗ ಆ ಮಹಿಳೆ ವಿಮಾನ ನಿಲ್ದಾಣದ ಹೊರಗಡೆ ತನ್ನ ಕುಟುಂಬಸ್ಥರಿಗಾಗಿ ಕಾಯುತ್ತಿದ್ದರು.
ಪೊಲೀಸರು ವಿಷಯ ತಿಳಿಸಿದಾಗಲೇ ಆ ಮಹಿಳೆಗೆ ವಿಷಯ ಗೊತ್ತಾಗಿದೆ. ಇಬ್ಬರದ್ದೂ ಒಂದೇ ರೀತಿಯ ಬ್ಯಾಗ್ ಆಗಿರುವುದರಿಂದ ಇಬ್ಬರಿಗೂ ಪ್ರಮಾದವಾಗಿದೆ. ಆ ಬಳಿಕ ಅವರಿಬ್ಬರೂ ತಮ್ಮ ಬ್ಯಾಗುಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj