ಗಾಂಧಿಯನ್ನೇ ಕೊಂದ ಆರೋಪಿ ಸಾವರ್ಕರ್ ಹೆಸ್ರಲ್ಲಿ ಕಾಲೇಜು ನಿರ್ಮಿಸಲು ಮುಂದಾದ ಕೇಂದ್ರ ಸರ್ಕಾರ: ಎನ್‌ಎಸ್‌ಯುಐ ತೀವ್ರ ವಿರೋಧ

ಮಹಾತ್ಮ ಗಾಂಧಿ ಕೊಲೆ ಆರೋಪಿ, ಹಿಂದುತ್ವ ಸಿದ್ದಾಂತದ ಪಿತಾಮಹ ವಿ.ಡಿ. ಸಾವರ್ಕರ್ ರ ಹೆಸರಿನ ಕಾಲೇಜನ್ನು ಉದ್ಘಾಟಿಸುವ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದ್ದು, ಕಾಂಗ್ರೆಸ್ ಮತ್ತು ಅದರ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐ ವಿರೋಧ ವ್ಯಕ್ತಪಡಿಸಿದೆ.
ಉದ್ದೇಶಿತ ಕಾಲೇಜಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರ ಹೆಸರು ಇಡಬೇಕೆಂದು ಒತ್ತಾಯಿಸಿದೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಾವರ್ಕರ್ ಕಾಲೇಜಿಗೆ ಶಿಲಾನ್ಯಾಸ ಮಾಡುವ ನಿರೀಕ್ಷೆಯಿದ್ದು, ಎನ್‌ಎಸ್‌ಯುಐ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿಗೆ ಪತ್ರ ಬರೆದಿದೆ.
ಎನ್ ಎಸ್ ಯು ಐ ಪ್ರಧಾನಿಗೆ ಬರೆದ ಪತ್ರದಲ್ಲಿ, “ಡಾ. ಮನಮೋಹನ್ ಸಿಂಗ್ ರ ಹೆಸರನ್ನು ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ವಿಶ್ವ ದರ್ಜೆಯ ಕಾಲೇಜಿಗೆ ಇಡಬೇಕು ಅವರ ಜೀವನ ಪ್ರಯಾಣವನ್ನು ಶೈಕ್ಷಣಿಕ ಪಠ್ಯದಲ್ಲಿ ಸೇರಿಸಬೇಕು.” ಎಂದು ಎನ್‌ಎಸ್‌ಯುಐ ಹೇಳಿದೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸಂಸದ ಡಾ. ಸೈಯದ್ ನಸೀರ್ ಹುಸೇನ್ ಪ್ರತಿಕ್ರಿಯಿಸಿ, “ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಈ ಕಾಲೇಜಿಗೆ ಅವರಲ್ಲಿ ಒಬ್ಬರ ಹೆಸರಿಟ್ಟಿದ್ದರೆ, ಅದು ಅವರಿಗೆ ಸಲ್ಲಿಸುವ ಗೌರವವಾಗುತ್ತಿತ್ತು” ಎಂದು ಹೇಳಿದ್ದಾರೆ.
“ಆದರೆ ಬಿಜೆಪಿಗೆ ಯಾವುದೇ ನಾಯಕರು ಅಥವಾ ಐಕಾನ್‌ಗಳು ಇಲ್ಲದ ಕಾರಣ, ಅವರು ಬ್ರಿಟಿಷರನ್ನು ಬೆಂಬಲಿಸಿದವರನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಕಾನೂನುಬದ್ಧಗೊಳಿಸುತ್ತಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪ್ರಸ್ತಾಪಿತ ಕಾಲೇಜನ್ನು ನಜಾಫ್‌ಗಢದ ರೋಶನ್‌ಪುರದಲ್ಲಿ ಅಂದಾಜು 140 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ವರದಿಯಾಗಿದ್ದು, ಪ್ರಧಾನಿ ಮೋದಿ ಈ ಯೋಜನೆಗೆ ಅಡಿಪಾಯ ಹಾಕಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj