ನೇಣು ಬಿಗಿದುಕೊಂಡು‌ ಸರ್ವೇ ಅಧಿಕಾರಿ ಆತ್ಮಹತ್ಯೆ: ಸಾವಿನ ಹಿಂದೆ ಹಲವು ಅನುಮಾನ - Mahanayaka

ನೇಣು ಬಿಗಿದುಕೊಂಡು‌ ಸರ್ವೇ ಅಧಿಕಾರಿ ಆತ್ಮಹತ್ಯೆ: ಸಾವಿನ ಹಿಂದೆ ಹಲವು ಅನುಮಾನ

shivakumar
13/02/2025

ಮೂಡಿಗೆರೆ:  ನೇಣು ಬಿಗಿದುಕೊಂಡು‌ ಸರ್ವೇ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಇವರ ಆತ್ಮಹತ್ಯೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.


Provided by

ಮೂಡಿಗೆರೆ ಸರ್ವೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್‌(45) ಮೃತ ದುರ್ದೈವಿಯಾಗಿದ್ದು, ಇವರು  ತುಮಕೂರು ಜಿಲ್ಲೆಯ ಗುಬ್ಬಿ ಮೂಲದವರಾಗಿದ್ದಾರೆ.

ಹತ್ತಾರು ವರ್ಷಗಳಿಂದ ಬಳಸುತ್ತಿದ್ದ‌ ಸಿಮ್ ನ್ನು  ಚೇಂಜ್ ಮಾಡಿದ್ದ ಸರ್ವೇ ಅಧಿಕಾರಿ ಶಿವಕುಮಾರ್ ನಿನ್ನೆಯಷ್ಟೇ ಹೊಸ ಸಿಮ್‌ ಖರೀದಿಸಿದ್ದರು. ಹೀಗಾಗಿ  ಇವರ ಆತ್ಮಹತ್ಯೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.


Provided by

ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿರುವ ಬಾಡಿಗೆ ಮನೆಯ ಸಮೀಪ ಮೂಡಿಗೆರೆ ಪೊಲೀಸರು ಯಾರನ್ನೂ ಬಿಡದೇ ಬ್ಯಾರಿಕೇಡ್ ಅಳವಡಿಸಿದ್ದು, ಆತ್ಮಹತ್ಯೆ ಕುರಿತು ತನಿಖೆ ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ