ಅಪ್ಪ-ಮಗ ಎಲ್ಲಾ ಇಲಾಖೆಗಳಲ್ಲೂ ಡೀಲ್ ಮಾಡುತ್ತಿದ್ದಾರೆ | ಯಡಿಯೂರಪ್ಪ ವಿರುದ್ಧ ಯತ್ನಾಳ್ ಆರೋಪ - Mahanayaka

ಅಪ್ಪ-ಮಗ ಎಲ್ಲಾ ಇಲಾಖೆಗಳಲ್ಲೂ ಡೀಲ್ ಮಾಡುತ್ತಿದ್ದಾರೆ | ಯಡಿಯೂರಪ್ಪ ವಿರುದ್ಧ ಯತ್ನಾಳ್ ಆರೋಪ

yathnal
02/04/2021

ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಇದೀಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ ಸಿಎಂ ಹಾಗೂ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ನಿರಂತರ ವಾyathnalಗ್ದಾಳಿ ನಡೆಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

 ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ , ರಾಜ್ಯದಲ್ಲಿ ನಡೆಯುತ್ತಿರುವುದು ಪ್ರಧಾನಿ ಮೋದಿಯವರ ಕನಸಿನ ಬಿಜೆಪಿ ಸರ್ಕಾರವಲ್ಲ. ಅಪ್ಪ-ಮಗನ ಸರ್ಕಾರ. ಅಪ್ಪ-ಮಗ ಕಾವೇರಿಯಲ್ಲಿ ಕುಳಿತು ಎಲ್ಲಾ ಇಲಾಖೆಗಳ ಡೀಲ್ ಮಾಡುತ್ತಿದ್ದಾರೆ ಎಂದು ಯತ್ನಾಳ್ ನೇರಾ ನೇರ ಆರೋಪ ಮಾಡಿದ್ದಾರೆ.

ಈಶ್ವರಪ್ಪ ಈ ಹಿಂದೆ ಬಿಜೆಪಿ ಕಟ್ಟಿದವರು. ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಹಾಗೂ ಯಡಿಯೂರಪ್ಪ ಪಕ್ಷ ಬಿಟ್ಟು ಮತ್ತೆ ಬಂದವರು. ಆದರೆ ಈಶ್ವರಪ್ಪ ಬಿಜೆಪಿಯಲ್ಲೇ ಇದ್ದಾರೆ. ಅಲ್ಲದೇ ಹಿರಿಯ ಸಚಿವರು. ಕ್ಯಾಬಿನೇಟ್ ದರ್ಜೆ ಸಚಿವರಿಗೆ ಅಧಿಕಾರವೇ ಇಲ್ಲದಿದ್ದರೆ ಈಶ್ವರಪ್ಪ ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

 ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಯಾಕೆ ಬಿ ಎಸ್ ವೈಗೆ ನಿರ್ದೇಶನ ನೀಡುತ್ತಿಲ್ಲ. ಈಶ್ವರಪ್ಪ ದೂರು ನೀಡಿದ್ದು ತಪ್ಪು ಎಂದಿದ್ದಾರೆ ಅರುಣ್ ಸಿಂಗ್ ಹೀಗೆ ಹೇಳುವುದೇ ತಪ್ಪು. ಅವರು ಈಶ್ವರಪ್ಪ ಪರವಾಗಿದ್ದಾರಾ? ಯಡಿಯೂರಪ್ಪ ಪರವಾಗಿದ್ದಾರಾ? ಅರುಣ್ ಸಿಂಗ್ ಗೆ ರಾಜ್ಯ ಉಸ್ತುವಾರಿ ನೀಡಲಾಗಿದೆ. ಅವರು ರಾಜ್ಯಕ್ಕೆ ಬರುತ್ತಾರೆ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರಗೆ ಶಹಬಾಸ್ ಗಿರಿ ಕೊಡುತ್ತಾರೆ ಹೋಗುತ್ತಾರೆ. ನಿಜಕ್ಕೂ ರಾಜ್ಯದಲ್ಲಿ ಏನು ನಡೆಯುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿ