ಪತ್ನಿಯೊಂದಿಗೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಅಶ್ವಥ್ ನಾರಾಯಣ - Mahanayaka
10:18 PM Friday 21 - February 2025

ಪತ್ನಿಯೊಂದಿಗೆ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಅಶ್ವಥ್ ನಾರಾಯಣ

ashwath narayan
18/02/2025

ಕೊಟ್ಟಿಗೆಹಾರ :  ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ  ಹಾಗೂ ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿರುವ ಡಾ.ಅಶ್ವಥ್ ನಾರಾಯಣ  ಅವರನ್ನು ಅಭಿನಂದಿಸಲಾಯಿತು.

ಸೋಮವಾರ ಅತ್ತಿಗೆರೆ ಗ್ರಾಮದ ತಮ್ಮ ಬಂಧು ಮತ್ತು ಸ್ನೇಹಿತರಾದ ಚೇತನ್ ಅತ್ತಿಗೆರೆ ಅವರ ಮನೆಯ ಗೃಹಪ್ರವೇಶಕ್ಕೆ ಡಾ. ಅಶ್ವಥ್ ನಾರಾಯಣ ಅವರು ಪತ್ನಿ ಶೃತಿ ಅವರೊಂದಿಗೆ ಆಗಮಿಸಿ ಶುಭ ಹಾರೈಸಿದರು.

ಚೇತನ್ ಅವರು ಬೆಂಗಳೂರಿನಲ್ಲಿ ಯುವ ಉದ್ಯಮಿಯಾಗಿದ್ದು, ಈ ಹಿಂದೆ ಡಾ. ಅಶ್ವಥ ನಾರಾಯಣ ಅವರ ಮಾರ್ಗದರ್ಶನದಲ್ಲಿ ಅವರ ಮಾಲೀಕತ್ವದ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು.

ಗೃಹ ಪ್ರವೇಶಕ್ಕೆ ಆಗಮಿಸಿದ್ದ   ಡಾ. ಅಶ್ವಥ್ ನಾರಾಯಣ ಮತ್ತು ಪತ್ನಿ ಶೃತಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಮುಖಂಡರಾದ ದೀಪಕ್ ದೊಡ್ಡಯ್ಯ, ಬಿ.ಎನ್. ಜಯಂತ್, ಜೆ.ಎಸ್.ರಘು,  ಸುಂದ್ರೇಶ್ ಕೊಣಗೆರೆ, ಸುರೇಂದ್ರ ಕೊಣಗೆರೆ, ಸಂಜಯ್ ಕೊಟ್ಟಿಗೆಹಾರ, ನಾಗೇಶ್ ಅತ್ತಿಗೆರೆ, ಚೇತನ್ ಅತ್ತಿಗೆರೆ ಅವರ ಕುಟುಂಬದವರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ