ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ: ಬಳ್ಳಾರಿಯಲ್ಲಿ ಕೋಳಿ, ಮೊಟ್ಟೆ ಮಾರಾಟ ದಿಢೀರ್ ಕುಸಿತ

ಬಳ್ಳಾರಿ: ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಂಧ್ರಪ್ರದೇಶ, ತೆಲಂಗಾಣ ಜೊತೆಗೆ ಗಡಿ ಹಂಚಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ಕುಕ್ಕುಟ ಉದ್ಯಮ ನೆಲಕಚ್ಚಿದ್ದು, ಮಾಲಿಕರು ತೀವ್ರ ನಷ್ಟ ಅನುಭವಿಸಿದ್ದಾರೆ.
ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೋಳ ಮಾರಾಟದಲ್ಲಿ ಭಾರೀ ಹಿನ್ನಡೆಯಾಗಿದೆ. ಹೀಗಾಗಿ ಹೋಲ್ಸೇಲ್ನಲ್ಲಿ ಬಾಯ್ಲರ್ ಕೋಳಿ ಪ್ರತಿ ಕೆ.ಜಿ.ಗೆ 90 ರೂ.ಗಳಂತೆ ಮಾರಾಟವಾಗುತ್ತಿತ್ತು. ಕೆಲ ದಿನಗಳಿಂದ ಈ ದರ 60-70ರೂ.ಗಳಿಗೆ ಕುಸಿದಿದೆ. ಮೊಟ್ಟೆ ಮಾರಾಟಕ್ಕೂ ಕಂಟಕ ಎದುರಾಗಿದ್ದು, 5 ರೂಪಾಯಿಗೆ ಮಾರಾಟವಾಗುತ್ತಿದ್ದ ಮೊಟ್ಟೆಯ ಬೆಲೆ 3.90ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಕೋಳಿ ಫಾರಂ ಮಾಲಿಕರಿಗೆ ನಷ್ಟವಾಗುತ್ತಿದೆ.
ಬಳ್ಳಾರಿಯಲ್ಲಿ 15 ಕೋಳಿ ಫಾರಂಗಳಿವೆ, ಇಲ್ಲಿ 30 ಲಕ್ಷಕ್ಕೂ ಹೆಚ್ಚು ಕೋಳಿಗಳನ್ನು ಸಾಕಣೆ ಮಾಡಲಾಗಿದೆ. ತೀವ್ರ ಬಿಸಿಲಿನ ತಾಪದ ಹಿನ್ನೆಲೆ ಕೋಳಿಗಳನ್ನ ರಕ್ಷಿಸಲು ತಂಪಿನ ವಾತಾವರಣ ಸೃಷ್ಟಿಸಲಾಗಿದೆ. ಸ್ಪ್ರಿಂಕ್ಲರ್ ವ್ಯವಸ್ಥೆ ಸಹಿತ ಹಲವು ತಂತ್ರಗಳನ್ನು ಬಳಕೆ ಮಾಡಿ ಕೋಳಿ ಸಾಕಣೆ ಮಾಡಲಾಗಿದೆ. ಆದರೆ ಹಕ್ಕಿ ಜ್ವರದ ಹಿನ್ನೆಲೆ ನಷ್ಟವಾಗಿದ್ದು, ಕುಕ್ಕುಟ ಉದ್ಯಮ ನಷ್ಟದ ಭೀತಿಯಲ್ಲಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿಲ್ಲವಾದರೂ, ವದಂತಿಗಳಿಂದಾಗಿ ಕೋಳಿ ಉದ್ಯಮಕ್ಕೆ ಪೆಟ್ಟುಬಿದ್ದಿದೆ ಎಂದು ಕೋಳಿ ಫಾರಂ ಮಾಲಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7