ಬ್ಯಾಂಕ್ ಆಫ್ ಬರೋಡದಲ್ಲಿ ಖಾಯಂ ಆಧಾರಿತ ಹುದ್ದೆಗಳ ನೇಮಕಾತಿ: 500ಕ್ಕೂ ಹೆಚ್ಚು ಉದ್ಯೋಗಾವಕಾಶ

Bank of Baroda Recruitment 2025 : ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಬ್ಯಾಂಕ್ ಆಫ್ ಬರೋಡದ, ವಿವಿಧ ವಿಭಾಗಗಳ 518 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದಾರೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ನಿನ್ನೆ ಅಂದರೆ 19 ಫೆಬ್ರವರಿ 2025 ರಿಂದ ಆರಂಭವಾಗಿದ್ದು, ಮಾರ್ಚ್ 11, 2025 ರವರೆಗೆ ಅವಕಾಶ ನೀಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶದ ಸದುಪಯೋಗ ಪಡೆಸಿಕೊಳ್ಳಿ.
ವಿಭಾಗವಾರು ಹುದ್ದೆಗಳ ವಿಂಗಡಣೆ :
* Information Technology — 350 ಹುದ್ದೆಗಳು
* Trade & Forex – – 97 ಹುದ್ದೆಗಳು
* Risk Management — 35 ಹುದ್ದೆಗಳು
* Security – – 36 ಹುದ್ದೆಗಳು
ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳು :
ಬ್ಯಾಂಕ್ ಆಫ್ ಬರೋಡದ ಈ ನೇಮಕಾತಿಗಾಗಿ ವಿವಿಧ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಅರ್ಹ ಶೈಕ್ಷಣಿಕ ವಿದ್ಯಾಭ್ಯಾಸ ಮುಗಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ಅರ್ಹತೆ ತಿಳಿಯಲು ಅಧಿಸೂಚನೆ ಓದಿ.
ವಯೋಮಿತಿ — ವಯೋಮಿತಿ ಹುದ್ದೆಗಳಿಗೆ ಅನುಗುಣವಾಗಿ 22 ರಿಂದ 37 ವರ್ಷ
ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ:
* ಇತರೆ ಹಿಂದುಳಿದ ವರ್ಗದ, ಸಾಮಾನ್ಯ ವರ್ಗದ ಹಾಗೂ ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600ರೂ. + GST
* ಇನ್ನುಳಿದ ವರ್ಗದವರಿಗೆ 100ರೂ. + GST
ಅರ್ಜಿ ಸಲ್ಲಿಕೆಗೆ ದಿನಾಂಕಗಳು :
ಈ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿನ್ನೆ ಅಂದರೆ 19 ಫೆಬ್ರವರಿ 2025 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 11, 2025 ಆಗಿದೆ.
ಅರ್ಜಿ ಸಲ್ಲಿಸಲು ಬ್ಯಾಂಕ್ ಆಫ್ ಬರೋಡದ ಅಧಿಕೃತ ಜಾಲತಾಣ: www.bankofbaroda.co.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: