ಗ್ರಾಮಸ್ಥರ ಹೃದಯ ಗೆದ್ದ ಬ್ಯಾಂಕ್ ಉದ್ಯೋಗಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ! - Mahanayaka
9:45 PM Saturday 22 - February 2025

ಗ್ರಾಮಸ್ಥರ ಹೃದಯ ಗೆದ್ದ ಬ್ಯಾಂಕ್ ಉದ್ಯೋಗಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ!

shridhar
21/02/2025

ಕೊಟ್ಟಿಗೆಹಾರ: ಕರ್ನಾಟಕ ಬ್ಯಾಂಕ್‌ನ ಬಣಕಲ್ ಶಾಖೆಯಲ್ಲಿ 18 ವರ್ಷಗಳ ಕಾಲ ಜನಸ್ನೇಹಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಧರ್ ಅವರ ವರ್ಗಾವಣೆಯನ್ನು ಅಂಗೀಕರಿಸಿ ಬಣಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು  ಬಿಲ್ಕೊಂಡುಗೆ ಸಮಾರಂಭವನ್ನು ಆಯೋಜಿಸಿದರು. ತೀರ್ಥಹಳ್ಳಿ ತಾಲೂಕಿನ ಕಿಮ್ಮನೆ ಗ್ರಾಮದವರಾದ ಶ್ರೀಧರ್ ಅವರು ಕೊಪ್ಪ ಕರ್ನಾಟಕ ಬ್ಯಾಂಕ್‌ಗೆ ವರ್ಗಾವಣೆಯಾಗಿದ್ದಾರೆ.

ಜನಸ್ನೇಹಿ ಶ್ರೀಧರ್‌ಗೆ ಸ್ಮರಣೆ: 

ಶ್ರೀಧರ್ ಅವರು ತಮ್ಮ 18 ವರ್ಷಗಳ ಸೇವಾ ಅವಧಿಯಲ್ಲಿ ಜನಸ್ನೇಹಿ ನಿಲುವಿನಿಂದ ಗ್ರಾಮಸ್ಥರ ಹೃದಯ ಗೆದ್ದಿದ್ದರು. ಅವರ ವರ್ಗಾವಣೆಯಿಂದ ಬೇಸರಗೊಂಡ ಗ್ರಾಮಸ್ಥರು ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ದೊರಕಲಿ ಎಂದು ಹಾರೈಸಿದರು.

ಬಣಕಲ್ ನಿವಾಸಿ ಬಿ.ಎಸ್. ಪ್ರವೀಣ್ ಮಾತನಾಡಿ, “ಶ್ರೀಧರ್ ಅವರು ಜನಸ್ನೇಹಿ ಕೆಲಸದ ಮೂಲಕ ಗ್ರಾಮಸ್ಥರ ಮನ ಗೆದ್ದಿದ್ದರು. ಅವರ ವರ್ಗಾವಣೆಯಿಂದ ನಮಗೆಲ್ಲ ನೋವಾಗಿದೆ. ಆದರೆ, ವರ್ಗಾವಣೆ ಉದ್ಯೋಗದಲ್ಲಿನ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಹೊಸ ಸ್ಥಳದಲ್ಲಿಯೂ ಅವರು ಯಶಸ್ವಿಯಾಗಿ ಸೇವೆ ಸಲ್ಲಿಸಲಿ ಎಂದು ಆಶಿಸುತ್ತೇವೆ” ಎಂದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ ಅವರು, “ವರ್ಗಾವಣೆ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಯಾವುದೇ ಸ್ಥಳದಲ್ಲಿದರೂ ಶ್ರದ್ದೆ ಮತ್ತು ಭಕ್ತಿಯಿಂದ ಕೆಲಸ ಮಾಡಿದರೆ ಜನಸ್ನೇಹಿ ಪಾತ್ರ ನಿರ್ವಹಿಸಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದನ್, ಗೌತಮ್, ಅನುದೀಪ್, ನಿಶಾಂತ್, ವಿಶ್ವಾಸ್, ಗಣಪತಿ, ಅರುಣ್ ಪೂಜಾರಿ, ರಂಗನಾಥ್ ಮತ್ತು ಪರೀಕ್ಷಿತ್ ಮೊದಲಾದವರು ಭಾಗವಹಿಸಿ ಶ್ರೀಧರ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ಬಣಕಲ್ ಕರ್ನಾಟಕ ಬ್ಯಾಂಕ್‌ ನಲ್ಲಿ ಜನಮನ್ನಣೆ ಗಳಿಸಿದ್ದ ಶ್ರೀಧರ್ ಅವರನ್ನು ಬೀಳ್ಕೊಡುವ ಸಮಾರಂಭವು ಸಂಕಟ ಮತ್ತು ಹಾರೈಕೆಗಳ ನಡುವೆ ನಡೆಯಿತು. ಅವರ ಹೊಸ ಕರ್ತವ್ಯ ಸ್ಥಳದಲ್ಲಿ ಯಶಸ್ಸು ಹರಿಯಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಅವರನ್ನು ಬೀಳ್ಕೊಟ್ಟರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ