ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಬಡಿದ ರಾಡ್ | ಶೂಟಿಂಗ್ ವೇಳೆ ಘಟನೆ - Mahanayaka
5:22 PM Friday 20 - September 2024

ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಬಡಿದ ರಾಡ್ | ಶೂಟಿಂಗ್ ವೇಳೆ ಘಟನೆ

kabja
03/04/2021

ಬೆಂಗಳೂರು:  ಫೈಟಿಂಗ್ ದೃಶ್ಯ ಶೂಟಿಂಗ್ ಮಾಡುತ್ತಿದ್ದ ವೇಳೆ ಸಹ ನಟ ಬೀಸಿದ ರಾಡ್ ಆಕಸ್ಮಿಕವಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಬಡಿದು ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ರಾತ್ರಿ ಮಿನರ್ವ ಮಿಲ್ ನಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆಯಾಗಿದೆ ಎಂದು ತಿಳಿದು ಬಂದಿದೆ.

ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ “ಕಬ್ಜ”ದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ.  ಗಾಯಗೊಂಡರೂ ಉಪೇಂದ್ರ ಅವರು ಶೂಟಿಂಗ್ ಮುಗಿಸಿದ ಬಳಿಕವೇ ಸ್ಥಳದಿಂದ ತೆರಳಿದ್ದಾರೆ ಎಂದು ಹೇಳಲಾಗಿದೆ.


Provided by

 

ಇತ್ತೀಚಿನ ಸುದ್ದಿ