ಕುಂಭಮೇಳದ ನೀರು ಕುಡಿಯಲು ಯೋಗ್ಯ ಆದ್ರೆ ಮೊದಲು ಅದನ್ನು ಕುಡಿದು ತೋರಿಸಲಿ: ಗಾಯಕ ವಿಶಾಲ್ ದದ್ಲಾನಿ ಸವಾಲ್

ಕುಂಭಮೇಳದ ನೀರು ಕುಡಿಯಲು ಯೋಗ್ಯವಾಗಿದೆ ಎಂದಾದರೆ ಮೊದಲು ಆ ನೀರನ್ನು ಒಮ್ಮೆ ಕುಡಿದು ನೀವು ತೋರಿಸಿ ಎಂದು ಖ್ಯಾತ ಸಂಗೀತ ಸಂಯೋಜಕ ಮತ್ತು ಗಾಯಕ ವಿಶಾಲ್ ದದ್ಲಾನಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸವಾಲು ಹಾಕಿದ್ದಾರೆ. ಕುಂಭಮೇಳದ ನೀರು ಮಲದ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿದೆ ಎಂಬ ವರದಿಯನ್ನ ತಳ್ಳಿಹಾಕಿ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಈ ಮೊದಲು ಯೋಗಿ ಆದಿತ್ಯನಾಥ ಪ್ರತಿಪಾದಿಸಿದ್ದರು.
ಕುಂಭಮೇಳದ ವಿವಿಧ ಸ್ಥಳಗಳಲ್ಲಿರುವ ನೀರಿನಲ್ಲಿ ಅತ್ಯಧಿಕ ಮಟ್ಟದ ಮಲದ ಬ್ಯಾಕ್ಟೀರಿಯ ಹಾಗೂ ಇತರ ವಿಷಕಾರಿ ಅಂಶಗಳು ತುಂಬಿವೆ ಎಂದು ಫೆಬ್ರವರಿ 17ರಂದು ರಾಷ್ಟ್ರೀಯ ಹಸಿರು ಮಂಡಳಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಹೇಳಲಾಗಿತ್ತು. ಇದರ ಬೆನ್ನಿಗೆ ಈ ವರದಿಯ ಕುರಿತು ದೇಶಾದ್ಯಂತ ಕಳವಳ ವ್ಯಕ್ತವಾಗಿತ್ತು. ಆದರೆ ಈ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಳ್ಳಿ ಹಾಕಿದ್ದರು. ನದಿ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ವಿಶಾಲ್ ದದ್ಲಾನಿ ಅವರು, ದ್ವೇಷಿಸುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಸರ್. ನಮಗೆ ನಿಮ್ಮ ಬಗ್ಗೆ ನಂಬಿಕೆ ಇದೆ ದಯವಿಟ್ಟು ಮುನ್ನಡೆಯಿರಿ ಹಾಗೂ ನೀರನ್ನು ಚೆನ್ನಾಗಿ ಗುಟುಕರಿಸಿ. ನೇರವಾಗಿ ನದಿಯಿಂದ. ಕ್ಯಾಮರಾದ ಮುಂದೆ ಹೀಗೆ ನೀರು ಕುಡಿಯಿರಿ ಎಂದು ಸವಾಲೆಸೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj