ಅಧಿಕಾರಕ್ಕೆ ಮುನ್ನ ಭರವಸೆ: ದಿಲ್ಲಿಯಲ್ಲಿ ಮಹಿಳೆಯರಿಗೆ ಕೈಕೊಡ್ತಾ ಕಮಲ?

ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ನೀಡುವುದಾಗಿ ಚುನಾವಣೆಗಿಂತ ಮೊದಲು ಬಿಜೆಪಿ ಘೋಷಿಸಿತ್ತು. ಆದರೆ ಇದೀಗ ತನ್ನ ಮೊದಲ ಮಂತ್ರಿ ಮಂಡಲದ ಸಭೆಯಲ್ಲಿ ಈ ವಿಷಯದ ಬಗ್ಗೆ ಯಾವ ಪ್ರಸ್ತಾಪವನ್ನೂ ಮಾಡಿಯೇ ಇಲ್ಲ. ಅದರ ಬದಲು ಆಯುಷ್ಮಾನ್ ಭಾರತ್ ಯೋಜನೆಗೆ ಅಂಗೀಕಾರವನ್ನು ನೀಡುವುದರೊಂದಿಗೆ 14 ಸಿ ಎನ್ ಜಿ ವರದಿಗಳನ್ನು ಮೊದಲ ವಿಧಾನಸಭಾ ಕಲಾಪದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
ದೆಹಲಿ ಚುನಾವಣೆಯ ವೇಳೆ ಬಿಜೆಪಿ ಘೋಷಿಸಿದ್ದ ಗ್ಯಾರಂಟಿ ಪಟ್ಟಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ಕೊಡುವುದು ಮೊದಲ ಸ್ಥಾನದಲ್ಲಿತ್ತು. ಮಾತ್ರ ಅಲ್ಲ ಮೊದಲ ಮಂತ್ರಿಮಂಡಲ ಸಭೆಯಲ್ಲಿಯೇ ಇದನ್ನು ಅಂಗೀಕರಿಸುವುದಾಗಿಯೂ ಅದು ವಾಗ್ದಾನವನ್ನು ಮಾಡಿತ್ತು. ಮಾತ್ರವಲ್ಲ ಚುನಾವಣೆಯಲ್ಲಿ ಗೆದ್ದ ಬಳಿಕವೂ ತಾನು ಮೊದಲ ಮಂತ್ರಿ ಮಂಡಲದ ಸಭೆಯಲ್ಲಿ ಇದನ್ನು ಅಂಗೀಕರಿಸುವುದಾಗಿಯೂ ಹೇಳಿತ್ತು. ಆದರೆ ಇದೀಗ ಅದು ಯು ಟರ್ನ್ ಹೊಡೆದಿದೆ.
ಇದೀಗ ಬಿಜೆಪಿಯ ಪ್ರಾಮಾಣಿಕತೆಯನ್ನು ಆಮ್ ಆದ್ಮಿ ಪಕ್ಷ ಪ್ರಶ್ನೆ ಮಾಡಿದೆ ಮೊದಲ ದಿನದಿಂದಲೇ ತನ್ನ ವಾಗ್ದಾನವನ್ನು ಉಲ್ಲಂಘಿಸಲು ಬಿಜೆಪಿ ಪ್ರಾರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಅತಿಶೀ ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj