ಸೌತಡ್ಕ ಮನೆ ದರೋಡೆ ಪ್ರಕರಣ: 9 ಆರೋಪಿಗಳ ಬಂಧನ | ವಿವಿಧ ಜಿಲ್ಲೆಗಳಲ್ಲಿ 12 ಕಡೆ ದರೋಡೆ ನಡೆಸಿದ್ದ ತಂಡ - Mahanayaka
10:17 AM Thursday 12 - December 2024

ಸೌತಡ್ಕ ಮನೆ ದರೋಡೆ ಪ್ರಕರಣ: 9 ಆರೋಪಿಗಳ ಬಂಧನ | ವಿವಿಧ ಜಿಲ್ಲೆಗಳಲ್ಲಿ 12 ಕಡೆ ದರೋಡೆ ನಡೆಸಿದ್ದ ತಂಡ

southadka
03/04/2021

ಮೂಡುಬಿದಿರೆ: ಸೌತಡ್ಕ ಒಂಟಿ ಮನೆಗೆ ನುಗ್ಗಿ ಮನೆಯ ಮಾಲಿಕ ತುಕ್ರಪ್ಪ ಶೆಟ್ಟಿ ಎಂಬವರನ್ನು ಕಟ್ಟಿಹಾಕಿ, ಅವರ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದು, ಬಂಧನದ ವೇಳೆ ಆರೋಪಿಗಳು ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ವಿವಿಧೆಡೆಗಳಲ್ಲಿ ದರೋಡೆ ನಡೆಸಿದ್ದರು ಎನ್ನುವುದು ಬಯಲಿಗೆ ಬಂದಿದೆ.

ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯ  ವೇಳೆ ಆರೋಪಿಗಳು ಸುಮಾರು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ತಿಳಿದು ಬಂದಿದೆ. ದರೋಡೆ ಪ್ರಕರಣ, ಪುಂಜಾಲಕಟ್ಟೆಯಲ್ಲಿ ಮನೆಕಳ್ಳತನ, ಮೂಡಬಿದಿರೆ, ಬಜಪೆ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಣಿ ದರೋಡೆ, ಬೆಂಗಳೂರು ವಿಜಯನಗರದಲ್ಲಿ ಮನೆಕಳ್ಳತನ ಯತ್ನ , ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ದುಷ್ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಬ್ದುಲ್ ರವೂಫ್ (24 ), ರಾಮಮೂರ್ತಿ (23) ಅಶ್ರಫ್ ಪೆರಾಡಿ(27), ಸಂತೋಷ್(24 , ನವೀದ್(36) , ರಮಾನಂದ ಎನ್ ಶೆಟ್ಟಿ(48), ಸುಮನ್(24) , ಸಿದ್ಧಿಕ್(27) , ಅಲಿಕೋಯಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿರುವ ಎರಡು ತಲವಾರು, ಏರ್ ಗನ್, ಒಂದು ಕಬ್ಬಿಣದ ರಾಡು ಒಂದು ಕಬ್ಬಿಣದ ಲಿವರ್ , ಒಂದು ಉದ್ದನೆಯ ಚಾಕು, ಮೆಣಸಿನ ಪುಡಿ ಮರದ ದೊಣ್ಣೆ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೂ ಆರೋಪಿಗಳ ವಿಚಾರಣೆಯ ಬಳಿಕ ಕೃತ್ಯಕ್ಕೆ ಸಹಕಾರ ನೀಡಿದ ಇನ್ನಿತರ ಆರೋಪಿಗಳನ್ನೂ ಪೊಲೀಸರು ಬಂಧಿಸಲು ಸಜ್ಜಾಗಿದ್ದಾರೆ. ಇಂತಹ ಕೃತ್ಯದಲ್ಲಿ ಸುಮಾರು 30ರಿಂದ 35  ಜನ ಆರೋಪಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಮನೆಯ ಮಾಲಿಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿಯಿಂದ ಇರಿದು ದರೋಡೆ

ಇತ್ತೀಚಿನ ಸುದ್ದಿ