ಹೊಸ ಮುನ್ನುಡಿ: ಎರಡು ವರ್ಷಗಳ ಬಳಿಕ ಮತ್ತೆ ಶಾಲೆಗೆ ಮರಳಿದ ಗಾಝಾದ ಮಕ್ಕಳು

ಎರಡು ವರ್ಷಗಳ ಬಳಿಕ ಗಾಝಾದ ಮಕ್ಕಳು ಮತ್ತೆ ಶಾಲೆಗೆ ಮರಳಿದ್ದಾರೆ. ಸೋಮವಾರದಿಂದ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಿದೆ. ಇಸ್ರೇಲ್ ಆಕ್ರಮಣದ ಬಳಿಕ ಕಳೆದ ಎರಡು ವರ್ಷಗಳಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ 6,25,000 ಮಕ್ಕಳ ಕಲಿಕೆ ಸ್ಥಗಿತಗೊಂಡಿತ್ತು.
ನಮಗೆ ಯುನಿಫಾರ್ಮ್ಗಳಿಲ್ಲ. ಆದರೆ ಶಿಕ್ಷಣ ಪಡೆಯುವುದರಿಂದ ಅದು ನಮ್ಮನ್ನು ತಡೆಯಲ್ಲ. ಶಾಲೆಗಳು ಧ್ವಂಸವಾಗಿದ್ದರೂ ನಾವು ನಮ್ಮ ಭವಿಷ್ಯವನ್ನು ಉತ್ತಮಗೊಳಿಸಿಯೇ ತೀರುವೆವು ಎಂದು ಹತ್ತನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಬಶೀರ್ ದ ನ್ಯೂ ಅರಬ್ ಪತ್ರಿಕೆಯೊಂದಿಗೆ ಮಾತಾಡುತ್ತಾ ತಿಳಿಸಿದ್ದಾನೆ.
ಯುದ್ಧ ಆರಂಭವಾದ ಆ ದಿನ ನನಗೆ ಈಗಲೂ ಜ್ಞಾಪಕವಿದೆ. ಇವತ್ತು ನಾನು ಮತ್ತೆ ನನ್ನ ಗೆಳೆಯರನ್ನು ಕಂಡೆ. ಅವರಲ್ಲಿ ಹೆಚ್ಚಿನವರು ಅತ್ಯಂತ ಕಠಿಣ ಮತ್ತು ಆಘಾತಕಾರಿ ಪರಿಸ್ಥಿತಿಯನ್ನು ನೋಡಿ ಬಂದಿದ್ದಾರೆ. ಅನೇಕರಿಗೆ ತಮ್ಮ ಕುಟುಂಬದವರು ನಷ್ಟವಾಗಿದ್ದಾರೆ ಅನೇಕರ ಮನೆಗಳು ಧ್ವಂಸವಾಗಿವೆ. ಆದರೆ ಅವರೆಲ್ಲರೂ ಇವತ್ತು ಈ ಕುಸಿದು ಬಿದ್ದ ಶಾಲೆಯಲ್ಲಿ ಇದ್ದಾರೆ ಮತ್ತು ನಾವು ಜೊತೆಗೂಡಿದ್ದೇವೆ ಎಂದು ಆತ ಹೇಳಿದ್ದಾನೆ.
ಶಿಕ್ಷಣ ಮಾತ್ರ ನಮ್ಮ ಬದುಕಿನಲ್ಲಿ ಬದಲಾವಣೆ ತರ ಬಲ್ಲದು. ಆದ್ದರಿಂದ ಯಾವುದೇ ಸವಾಲುಗಳ ನಡುವೆಯೂ ನಾವು ಕಲಿಯುತ್ತೇವೆ ಎಂದಾತ ಹೇಳಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj