135 ಸ್ಥಳಗಳಲ್ಲಿ ರಂಝಾನ್ ಟೆಂಟ್ ನಿರ್ಮಾಣ: ಶಾರ್ಜಾ ಹೇಳಿಕೆ

ರಂಝಾನ್ ನಲ್ಲಿ ಉಚಿತವಾಗಿ ಇಫ್ತಾರ್ ನಡೆಸುವುದಕ್ಕಾಗಿ 135 ಸ್ಥಳಗಳಲ್ಲಿ ರಂಝಾನ್ ಟೆಂಟ್ ನಿರ್ಮಿಸುವುದಾಗಿ ಶಾರ್ಜಾ ಚಾರಿಟಿ ಅಸೋಸಿಯೇಷನ್ ಹೇಳಿದೆ. ಈ ಬಾರಿ ರಂಝಾನ್ ನಲ್ಲಿ 9 ಲಕ್ಷ ಮಂದಿಗೆ ಇಫ್ತಾರ್ ನಡೆಸುವ ಗುರಿ ಇಟ್ಟು ಕೊಂಡಿದೆ.
ಆದಾಯ ಕಡಿಮೆ ಇರುವ ಕುಟುಂಬಗಳು, ಕಾರ್ಮಿಕರು ದುರ್ಬಲ ವಿಭಾಗಗಳು ಮುಂತಾದವರಿಗೆ ಪೋಷಕಾಂಶ ಯುಕ್ತ ಆಹಾರ ತಲುಪಿಸುವುದಕ್ಕಾಗಿ ಹಮ್ಮಿಕೊಳ್ಳಲಾಗಿರುವ ಯೋಜನೆ ಇದಾಗಿದೆ. ಉಪವಾಸಿಗರಿಗೆ ಇಫ್ತಾರ್ ಎಂಬ ಯೋಜನೆಯ ಭಾಗವಾಗಿ ಪ್ರತಿ ವರ್ಷ ಉಚಿತವಾಗಿ ಇಫ್ತಾರ್ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ.
ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ರಂಝಾನ್ ಟೆಂಟುಗಳು ಮತ್ತು ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ರಂಝಾನ್ ನಲ್ಲಿ ಅತ್ಯಂತ ಹೆಚ್ಚು ಅಗತ್ಯ ಉಳ್ಳವರಿಗೆ ಇಫ್ತಾರ್ ಕಿಟ್ ಸಿಗುವಂತೆ ಮಾಡುವುದನ್ನು ಗುರಿಯಾಗಿಟ್ಟುಕೊಂಡು ಚಾರಿಟಿ ಈ ಈ ಕೆಲಸ ಮಾಡುತ್ತಿದೆ. ಸಾಕಷ್ಟು ಅಧ್ಯಯನ ನಡೆಸಿದ ಬಳಿಕ 135 ಟೆಂಟುಗಳನ್ನು ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಚಾರಿಟಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj