ಟಾಟಾದ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ ಏರ್ ಟೆಲ್ - Mahanayaka
10:04 PM Friday 28 - February 2025

ಟಾಟಾದ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ ಏರ್ ಟೆಲ್

27/02/2025

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್‌ ಇನ್ನೊಂದು ಪ್ರಮುಖ ಉದ್ಯಮ ಸಮೂಹ ಟಾಟಾದ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ವಿಲೀನಗೊಳಿಸುವ ಕುರಿತು ಟಾಟಾ ಗ್ರೂಪ್‌ ಜೊತೆ ಚರ್ಚೆ ನಡೆಸುತ್ತಿರುವುದಾಗಿ ಏರ್‌ಟೆಲ್‌ ಹೇಳಿದೆ.
ಈ ವಿಲೀನವು ಷೇರು ವಿನಿಮಯ ರೂಪದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ವಿಲೀನಗೊಂಡ ಸಂಸ್ಥೆಯಲ್ಲಿ ಶೇ. 50ಕ್ಕೂ ಹೆಚ್ಚಿನ ಷೇರನ್ನು ಭಾರ್ತಿ ಏರ್‌ಟೆಲ್‌ ಹೊಂದುವ ಸಂಭವ ಇದೆ. ಈ ಒಪ್ಪಂದದಿಂದ ಏರ್‌ಟೆಲ್‌ಗೆ ಮೊಬೈಲ್ ಹೊರತಾದ ಸೇವೆಗಳಿಂದ ಆದಾಯವನ್ನು ಹೆಚ್ಚಿಸಲು ಸಹಾಯ ಆಗಲಿದೆ.

ಟಾಟಾ ಪ್ಲೇನಲ್ಲಿ 2 ಕೋಟಿ ಬಳಕೆದಾರರು ಇದ್ದು, ವಿಲೀನದ ಬಳಿಕ ಏರ್‌ಟೆಲ್‌ಗೆ ಈ 2 ಕೋಟಿ ಗ್ರಾಹಕರನ್ನು ಪಡೆಯಲು ಸಾಧ್ಯವಾಗಲಿದೆ. ಬ್ರಾಡ್‌ಬ್ಯಾಂಡ್, ಟೆಲಿಕಾಂ ಮತ್ತು ಡಿಟಿಎಚ್‌ ಸೇವೆಗಳ ಪ್ಲಾನ್‌ಗಳನ್ನು ಒಟ್ಟಿಗೆ ಒಂದೇ ಚಂದಾದಾರಿಕೆಯಾಗಿ ನೀಡಲು ಸಾಧ್ಯವಾಗಲಿದೆ.
ಈ ಹಿಂದೆ 2016ರಲ್ಲಿ ವಿಡಿಯೋಕಾನ್‌ ಡಿ2ಎಚ್‌ ಹಾಗೂ ಡಿಶ್‌ ಟಿವಿ ವಿಲೀನವಾಗಿದ್ದವು. ಇದಾದ ಬಳಿಕ ಈ ವಲಯದಲ್ಲಿ ನಡೆಯುತ್ತಿರುವ ಮಹತ್ವದ ವಿಲೀನ ಇದಾಗಿದೆ.
ವಿಲೀನಗೊಂಡ ಸಂಸ್ಥೆಯನ್ನು ಏರ್‌ಟೆಲ್‌ ಸಂಸ್ಥೆಯೇ ಮುನ್ನಡೆಸುವ ಸಾಧ್ಯತೆ ಇದೆ. ಆಡಳಿತ ಮಂಡಳಿಯಲ್ಲಿ ಟಾಟಾ ಸಮೂಹಕ್ಕೆ ಎರಡು ಸ್ಥಾನಗಳು ದೊರಕುವ ಅಂದಾಜಿದೆ ಈ ವಿಲೀನಗೊಂಡ ಸಂಸ್ಥೆಯ ಮೌಲ್ಯ ಸುಮಾರು 7,000 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

 

ಇತ್ತೀಚಿನ ಸುದ್ದಿ