ಗಾಝಾಕ್ಕೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಡಿಯೋ ಪೋಸ್ಟ್: ತೀವ್ರ ಆಕ್ಷೇಪ - Mahanayaka

ಗಾಝಾಕ್ಕೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಡಿಯೋ ಪೋಸ್ಟ್: ತೀವ್ರ ಆಕ್ಷೇಪ

28/02/2025

ಗಾಝಾಕ್ಕೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಡಿಯೋ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಟ್ರುತ್ ಸೋಶಿಯಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಟ್ರಂಪ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಗಾಝಾ 2025: ಮುಂದೇನು ಎಂಬ ಶೀರ್ಷಿಕೆಯಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇಸ್ರೇಲ್ ಪ್ರಧಾನಿ ನೇತಾನ್ಯಾಹು ಜೊತೆ ಟ್ರಂಪ್ ಕಾಕ್ಟೇಲ್ ಕುಡಿಯುತ್ತಾ ಆಡಂಬರ ಬೋಟಿನಲ್ಲಿ ಸಾಗುವುದು ಮತ್ತು ಆಗ ಎಲೋನ್ ಮಸ್ಕ್ ಅಲ್ಲಿಗೆ ಬರುವುದೆಲ್ಲ ಎ ಐ ವಿಡಿಯೋ ದಲ್ಲಿ ದಾಖಲಾಗಿದೆ. ಈ ಮೊದಲು ಗಾಝಾವನ್ನು ತಾನು ಪ್ರವಾಸಿ ಕೇಂದ್ರವಾಗಿ ಮಾರ್ಪಡಿಸುವುದಾಗಿ ಟ್ರಂಪ್ ಹೇಳಿದ್ದರು. ಪ್ರವಾಸಿ ತಾಣವಾಗಿ ಗಾಝಾ ಹೇಗಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಆದರೆ ಈ ವಿಡಿಯೋದ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಹಮಾಸ್ ಇದನ್ನು ಪ್ರಬಲವಾಗಿ ಖಂಡಿಸಿದೆ. ಜನರ ಭಾವನೆ ಮತ್ತು ಬಯಕೆಗೆ ಮತ್ತೊಮ್ಮೆ ಟಂಪ್ ಅಪಚಾರ ಎಸಗಿದ್ದಾರೆ ಎಂದು ಹಮಾಸ್ ಹೇಳಿದೆ.

ಗಾಝಾವನ್ನು ಪುನರ್ ನಿರ್ಮಿಸುವುದು, ಆರ್ಥಿಕವಾಗಿ ಬಲಿಷ್ಠ ಗೊಳಿಸುವುದು ಮತ್ತು ಮಕ್ಕಳಿಗೆ ಒಂದೊಳ್ಳೆಯ ಭಾವಿಯನ್ನು ಸೃಷ್ಟಿಸುವುದನ್ನು ಗಾಝಾದ ಜನರು ಎದುರು ನೋಡುತ್ತಿದ್ದಾರೆ. ಆದರೆ ದೊಡ್ಡದೊಂದು ಜೈಲಿನ ಒಳಗೆ ಇದು ಎಂದೂ ಕೂಡ ಸಾಧ್ಯವಾಗದು ಎಂದು ಹಮಾಸ್ ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ