ರೈಲು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್ ನ ಬಂಧನ! - Mahanayaka

ರೈಲು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್ ನ ಬಂಧನ!

YouTuber
01/03/2025

ನವದೆಹಲಿ: ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ರೈಲು ಪ್ರಯಾಣಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್ ಒಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಅನುಗ್ರಹ ನಾರಾಯಣ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯೂಟ್ಯೂಬರ್ ಚಲಿಸುತ್ತಿದ್ದ ರೈಲಿನ ಸಮೀಪಕ್ಕೆ ಹೋಗಿ, ಕಿಟಕಿ ಬಳಿ ಕುಳಿತಿದ್ದ ಪ್ರಯಾಣಿಕನಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದು, ಬಳಿಕ ಈ ವಿಡಿಯೋವನ್ನು ತನ್ನ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾನೆ.

ಈ ವಿಡಿಯೋ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋ ಆಧರಿಸಿ ತನಿಖೆ ನಡೆಸಿದ ರೈಲ್ವೇ ಸಂರಕ್ಷಣಾ ಪಡೆ ಆರೋಪಿ ಯೂಟ್ಯೂಬರ್ ರಿತೇಶ್ ಕುಮಾರ್ ಎಂಬಾತನನ್ನು ಬಂಧಿಸಿದೆ. ಘಟನೆಯ ಬಗ್ಗೆ ಯೂಟ್ಯೂಬರ್ ಬಳಿಕ ಕ್ಷಮೆಯಾಚಿಸಿರುವ ವಿಡಿಯೋವನ್ನೂ ರೈಲ್ವೇ ಸಂರಕ್ಷಣಾ ಪಡೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ನಾನು ಯೂಟ್ಯೂಬರ್ ಆಗಿದ್ದು, ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ವಿಡಿಯೋ ಪೋಸ್ಟ್ ಮಾಡುತ್ತೇನೆ. ಹಾಗಾಗಿ ಇತ್ತೀಚೆಗೆ ಅನುಗ್ರಹ ನಾರಾಯಣ ರಸ್ತೆಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದೇನೆ. ಇದು ನನ್ನ ತಪ್ಪು. ಈ ರೀತಿ ಇನ್ನು ಮಾಡುವುದಿಲ್ಲ, ದಯವಿಟ್ಟು ಕ್ಷಮಿಸಿ ಎಂದು ವಿಡಿಯೋದಲ್ಲಿ ಆರೋಪಿ ಯೂಟ್ಯೂಬರ್ ಹೇಳಿಕೊಂಡಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ