ಸಾಫ್ಟ್ ವೇರ್ ಇಂಜಿನಿಯರ್ ಉದ್ಯೋಗಕ್ಕೆ ಬೈ ಬೈ: ಕುರ್ತಾ ಮಾರಾಟಕ್ಕಿಳಿದು ಬಿಗ್ ಸಕ್ಸಸ್

ಜೈಪುರದ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸಿದ್ದಿ ಎಂಬುವರು ಕುರ್ತಾ ಮಾರಾಟಕ್ಕಿಳಿದು ಇದೀಗ ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲಾಗಿದೆ. ಸ್ವಂತದೊಂದು ವ್ಯಾಪಾರ ಆರಂಭಿಸಬೇಕು ಅನ್ನುವ ಗುರಿಯೊಂದಿಗೆ ಏಳು ವರ್ಷಗಳ ಹಿಂದೆ ಸಿದ್ದಿ ಅವರು ಐಟಿ ಕೆಲಸವನ್ನ ಬಿಟ್ಟು ಈ ವ್ಯಾಪಾರ ರಂಗಕ್ಕೆ ಇಳಿದರು. ಇವರ ಕಂಪನಿಯ ಮುಖ್ಯ ಆಕರ್ಷಣೆ ಏನೆಂದರೆ ಡಿಸೈನರ್ ಕುರ್ತಾ.
ಕೈಯಿಂದ ಮಾಡಲಾಗುವ ವಿಶೇಷ ಎಂಬ್ರಾಯಿಡರಿ ಈ ಕುರ್ತಾಗಳಲ್ಲಿದೆ.. ಕುರ್ತಾ ಮಾತ್ರವಲ್ಲದೆ ಸೂಟ್ ಗಳನ್ನು ಕೂಡಾ ಇವರು ಹೊಲಿಯುತ್ತಿದ್ದಾರೆ. ಹ್ಯಾಂಡ್ ಕ್ರಾಫ್ಟ್ ಡ್ ಸೂಟುಗಳಿಂದ ಇವ್ರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಏಳು ಸಾವಿರ ರೂಪಾಯಿಯಿಂದ ಸಿದ್ದಿ ಹ್ಯಾಂಡ್ ಕ್ರಾಫ್ಟಡ್ ಕುರ್ತಗಳ ಬೆಲೆ ಪ್ರಾರಂಭವಾಗುತ್ತದೆ. ಆರಂಭದಲ್ಲಿ ಆನ್ಲೈನ್ ಮೂಲಕ ಇವರು ಕುರ್ತಾಗಳ ಮಾರಾಟಕ್ಕೆ ಇಳಿದಿದ್ದರು.
ಈ ಹಿಂದೆ ಮೊಘಲರು ಪರ್ಷಿಯನ್ ಕರ ಕೌಶಲ ತಜ್ಞರು ಗೊಟ್ಟ ಪಾಟಿ ಎಂಬ ಕರಕೌಶಲ ವಿದ್ಯೆಯನ್ನ ಭಾರತಕ್ಕೆ ಪರಿಚಯಿಸಿದ್ದರು ಅದನ್ನೇ ಈ ಸಿದ್ದಿ ಇದೀಗ ಬಳಸುತ್ತಿದ್ದಾರೆ. ಗೊಟ್ಟ ಪಾಟಿ ಡಿಸೈನ ವಸ್ತ್ರಗಳಿಗೆ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಸಾಮಾನ್ಯವಾಗಿ ಈ ಡಿಸೈನ್ ಅನ್ನು ಬೆಲೆಬಾಳುವ ಸಾರಿಗಳು ಲೆಹಂಗಿಗಳಿಗೆ ಹಾಕಲಾಗುತ್ತದೆ. ಆದರೆ ಈ ಸಿದ್ದಿ ಇದೀಗ ಕುರ್ತಾಕ್ಕೆ ಬಳಸಿ ವಿಶೇಷ ಆಕರ್ಷಣೆಗೆ ಪಾತ್ರವಾಗಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸಿದ್ದಿ 2022 ರಲ್ಲಿ ಸಿದ್ಧಿ ಕುರ್ತಾ ಘರ್ ಎಂಬ ಅಂಗಡಿಯನ್ನು ತೆರೆದರು. ಇವರಿಂದ 2000, 3000 ರೂಪಾಯಿಗೆ ಕುತಾಗಳನ್ನ ಪಡಕೊಳ್ಳುವ ಹೋಲ್ ಸೇಲ್ ಮಾರಾಟಗಾರರು ಅದನ್ನು 14,000 ಕ್ಕಿಂತಲೂ ಅಧಿಕ ಬೆಲೆಗೆ ಮಾರುತಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj