ಟಿವಿ ಚಾನೆಲ್ ನ ಚರ್ಚೆಯಲ್ಲಿದ್ದ ವೇಳೆ ಕಾವಿಧಾರಿಗಳಿಂದ ತನ್ನ ಮೇಲೆ ಆಕ್ರಮಣ: ಐಐಟಿ ಬಾಬಾ ಆರೋಪ

ಟಿವಿ ಚಾನೆಲ್ ನಲ್ಲಿ ಚರ್ಚೆ ನಡೆಸುತ್ತಿರುವ ವೇಳೆ ಕಾವಿಧಾರಿಗಳು ತನ್ನ ಮೇಲೆ ಆಕ್ರಮಣ ನಡೆಸಿದ್ದಾರೆ ಎಂದು ಐಐಟಿ ಬಾಬಾ ಎಂದೇ ಗುರುತಿಸಿಕೊಂಡಿರುವ ಅಭಯ್ ಸಿಂಗ್ ಆರೋಪಿಸಿದ್ದಾರೆ. ನೋಯಿಡಾದ ಸ್ಥಳೀಯ ಚಾನೆಲ್ ನಲ್ಲಿ ಚರ್ಚೆ ನಡೆಸ್ತಾ ಇದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾವಿ ಬಟ್ಟೆ ಧರಿಸಿದ್ದ ಜನರು ನ್ಯೂಸ್ ರೂಂಗೆ ಬಂದು ನನ್ನೊಡೆನೆ ಅತ್ಯಂತ ಅನಾಗರಿಕವಾಗಿ ವರ್ತಿಸಿದರು ಎಂದು ಹೇಳಿರುವ ಬಾಬಾ, ಬಳಿಕ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆಯನ್ನೂ ನಡೆಸಿದರು.. ಪೊಲೀಸರ ಮಧ್ಯಪ್ರದೇಶದಿಂದ ಅವರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಆದರೆ ಘಟನೆಯ ಕುರಿತಂತೆ ದೂರು ನೀಡಲು ಬಾ ಬಾ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನದ ಹಿಂದೆ ಚಾನೆಲ್ ನಲ್ಲಿ ಅವರು ಚರ್ಚೆಯಲ್ಲಿ ಭಾಗಿಯಾಗಿದ್ದರು ಈ ಸಂದರ್ಭದಲ್ಲಿ ಸನ್ಯಾಸಿ ಗಳ ಒಂದು ಗುಂಪು ಸ್ಟುಡಿಯೋದೊಳಗೆ ಪ್ರವೇಶಿಸಿದ್ದಲ್ಲದೆ ಬಾಬಾ ಜೊತೆ ವಾಗ್ವಾದಕ್ಕೆ ಮುಂದಾಯಿತು. ಇದರಿಂದಾಗಿ ಸ್ಟುಡಿಯೋದಿಂದ ಅವರು ಹೊರಗೆ ಬಂದರು ಎಂದು ವರದಿಯಾಗಿದೆ.
ಭಾರತ ಪಾಕಿಸ್ತಾನ ನಡುವಿನ ಚಾಂಪಿಯನ್ ಟ್ರೋಫಿ ಕ್ರಿಕೆಟ್ ನಲ್ಲಿ ಪಾಕಿಸ್ತಾನ ಗೆಲ್ಲುತ್ತದೆ ಎಂದವರು ಭವಿಷ್ಯ ನುಡಿದಿದ್ದರು. ಆದರೆ ಆ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆ ಬಳಿಕ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು . ಈ ಕುರಿತಂತೆ ಎದ್ದ ಪ್ರಶ್ನೆಗೆ ಅವರು ಉತ್ತರ ನೀಡುತ್ತಾ, ನೀವು ಭವಿಷ್ಯವನ್ನು ನಂಬಬೇಡಿ ನಿಮ್ಮ ಮೆದುಳನ್ನು ಉಪಯೋಗಿಸಿ ಎಂದು ಹೇಳಿಕೆ ನೀಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj