ಸತ್ತು ಹೋದ ಬೆಕ್ಕಿಗೆ ಜೀವ ಬರುತ್ತದೆ ಎಂದು 2 ದಿನ ಕಾದುಕುಳಿತಳು: ಮೂರನೇ ದಿನ ತಾನೂ ಪ್ರಾಣ ಬಿಟ್ಟಳು! - Mahanayaka

ಸತ್ತು ಹೋದ ಬೆಕ್ಕಿಗೆ ಜೀವ ಬರುತ್ತದೆ ಎಂದು 2 ದಿನ ಕಾದುಕುಳಿತಳು: ಮೂರನೇ ದಿನ ತಾನೂ ಪ್ರಾಣ ಬಿಟ್ಟಳು!

pooja, 32 was a resident of amroha's hasanpur
02/03/2025

ಅಮ್ರೋಹಾ:  ಸಾಕುಬೆಕ್ಕು ಸತ್ತು ಹೋಯ್ತು… ಅದಕ್ಕೆ ಮತ್ತೆ ಜೀವ ಬರುತ್ತದೋ  ಎಂದು ಆಕೆ ಎರಡು ದಿನ ಕಾದುಕುಳಿತಳು, ಆದ್ರೆ ಬೆಕ್ಕು  ಮತ್ತೆ ಬದುಕಿ ಬರಲೇ ಇಲ್ಲ, ತನ್ನ ಭರವಸೆ ಸುಳ್ಳಾಯ್ತು ಎಂದು ತಿಳಿದ ತಕ್ಷಣ ಆಕೆಯೂ ಸಾವಿನ ಹಾದಿ ಹಿಡಿದಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ….

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ  ಇಲ್ಲಿನ ಹಸನ್ ಪುರ ನಿವಾಸಿ ಪೂಜಾ(32) ಸಾವಿಗೆ ಶರಣಾದ ಮಹಿಳೆಯಾಗಿದ್ದಾಳೆ.  ಪೂಜಾ  ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ಜೀವನದ ಹಿಂದಿನ ಸ್ಟೋರಿ ಬಹಿರಂಗವಾಗಿದೆ.

ಸುಮಾರು 8 ವರ್ಷಗಳ ಹಿಂದೆ ಪೂಜಾ ದೆಹಲಿಯ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಆದರೆ ಸಂಸಾರದಲ್ಲಿ ಹೊಂದಾಣಿಕೆ ಕಾಣದ ಕಾರಣ, ಎರಡು ವರ್ಷಗಳ ಹಿಂದೆ ಅವರು ವಿಚ್ಛೇದನ ಪಡೆದುಕೊಂಡು ತಮ್ಮ ಪತಿಯಿಂದ ಬೇರ್ಪಟ್ಟರು.

ವಿಚ್ಛೇದನದ ಬಳಿಕ  ತಮ್ಮ ತಾಯಿ ಗಜ್ರಾ ದೇವಿ ಜೊತೆಗೆ ಅವರು ಪೋಷಕರ ಮನೆಯಲ್ಲೇ ವಾಸವಿದ್ದರು. ತಮ್ಮ ಒಂಟಿತನ ಕಳೆಯಲು ಪೂಜಾ ಒಂದು ಬೆಕ್ಕನ್ನು ಸಾಕಿದರು. ಆ ಬೆಕ್ಕಿನ ಪ್ರೀತಿಯಿಂದ ತಮ್ಮ ನೋವನ್ನೆಲ್ಲ ಮರೆತು ಬದುಕಲು ಆರಂಭಿಸಿದ್ದರು. ಆದರೆ ಸಾಕು ಬೆಕ್ಕು ಇದ್ದಕ್ಕಿದ್ದಂತೆ ಸತ್ತು ಹೋಗಿದೆ. ಅದು ಸತ್ತು ಹೋಗಿದೆ ಎನ್ನುವುದು ತಿಳಿದಿದ್ದರೂ, ಪೂಜಾ, ಆ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ, ಆ ಬೆಕ್ಕಿಗೆ ಜೀವ ಬರುತ್ತದೆ ಎಂದು ಎರಡು ದಿನ ಆಕೆ ಕಾದುಕುಳಿತಳು. ಪೂಜಾಳ ಸ್ಥಿತಿ ಕಂಡು ಆಕೆಯ ತಾಯಿ ಹಾಗೂ ಕುಟುಂಬದ ಸದಸ್ಯರು ಬೆಕ್ಕಿನ ಮೃತದೇಹವನ್ನ ಹೂಳಲು ಆಕೆಯ ಮನವೊಲಿಸಿದರು. ಆದರೆ ಆಕೆ ಬೆಕ್ಕನ್ನು ಹೂಳಲು ಬಿಡಲಿಲ್ಲ.

ಶನಿವಾರ(ಫೆ.1)ರಾತ್ರಿ 8 ಗಂಟೆಯ ಸುಮಾರಿಗೆ ಮನೆಯ ಮೂರನೇ ಮಹಡಿಯಲ್ಲಿರುವ ತನ್ನ ಕೋಣೆಗೆ ಬೀಗ ಹಾಕಿಕೊಂಡ ಪೂಜಾ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅತ್ತ, ಮಗಳು ಎಲ್ಲಿ ಹೋದಳು ಎಂದು ತಾಯಿ ಹುಡುಕಿಕೊಂಡು ಹೋದ ವೇಳೆ ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಫ್ಯಾನಿನಲ್ಲಿ ಕಂಡು ಬಂದಿತ್ತು. ಅವರು ಕಿರುಚಾಡಿ, ರೋದಿಸಿದ ವೇಳೆ ಸ್ಥಳೀಯರು ಆಗಮಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ