ಗಾಝಾದ ಜನರಿಗಾಗಿ ಭಾರೀ ದೊಡ್ಡ ಇಫ್ತಾರ್ ಯೋಜನೆಯೊಂದಿಗೆ ರಂಗಕ್ಕಿಳಿದ ಕತಾರ್

ಗಾಝಾದ ಜನರಿಗಾಗಿ ಕತಾರ್ ಭಾರೀ ದೊಡ್ಡ ಇಫ್ತಾರ್ ಯೋಜನೆಯೊಂದಿಗೆ ರಂಗಕ್ಕಿಳಿದಿದೆ. ಮೊದಲ ದಿನ 7,000 ಮಂದಿಗೆ ಇಫ್ತಾರ್ ಗೆ ಬೇಕಾದ ಎಲ್ಲ ಸೌಲಭ್ಯದೊಂದಿಗೆ ಸೆಂಟ್ರಲ್ ಗಾಝಾದ ಝಯ್ ತೂನ್ ಮತ್ತು ಈಸ್ಟರ್ನ್ ಗೌರ್ನರೇಟ್ ನ ಶುಜೈಲ್ ನಲ್ಲಿ ಇಫ್ತಾರ್ ಟೆಂಟುಗಳನ್ನು ಸ್ಥಾಪಿಸಿ ಜನರ ಮನಸ್ಸು ಗೆದ್ದಿದೆ.
ಯುದ್ಧದಿಂದಾಗಿ ಬೇರೆಡೆ ಹೋಗಿದ್ದ ಜನರು ಕದನ ವಿರಾಮ ಒಪ್ಪಂದದ ಬಳಿಕ ಭಾರಿ ಸಂಖ್ಯೆಯಲ್ಲಿ ಈ ನಗರಕ್ಕೆ ಪ್ರವೇಶಿಸಿದ್ದಾರೆ. ಆದರೆ ಬೆಲೆ ಏರಿಕೆ ಉಂಟಾಗಿರುವುದಲ್ಲದೆ ಆಹಾರ ವಸ್ತುಗಳ ಕ್ಷಾಮವೂ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕತಾರ್ ಇಫ್ತಾರ್ ಯೋಜನೆಯು ಭಾರಿ ಪ್ರಶಂಸೆಗೆ ಪಾತ್ರವಾಗಿದೆ.
ಕತರ್ ಚಾರಿಟಿಯ ಮೂಲಕ ರಂಜಾನ್ ನಲ್ಲಿ ಗಿವಿಂಗ್ ಲೈವ್ ಆನ್ ಯೋಜನೆಯ ಅಧೀನದಲ್ಲಿ 45 ರಾಷ್ಟ್ರಗಳ ಬಡವರಿಗೆ ಅಗತ್ಯ ಆಹಾರ ವಸ್ತುಗಳನ್ನು ಪೂರೈಸಲಾಗುತ್ತಿದೆ. ಒಟ್ಟು 45 ಲಕ್ಷ ಜನರಿಗೆ ಅಗತ್ಯ ಆಹಾರ ವಸ್ತುಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಫ್ತಾರ್, ಹಬ್ಬದ ವಸ್ತ್ರಗಳು, ಫಿತೃಝಕಾತ್ ಮುಂತಾದ ನೆರವುಗಳನ್ನು ಗಾಝಾಕ್ಕೆ ತಲುಪಿಸಲಾಗುವುದು ಎಂದು ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj