ಇಸ್ರೇಲ್ ನಲ್ಲಿ ಚೂರಿ ಇರಿತ: 70 ವರ್ಷದ ವ್ಯಕ್ತಿ ಸಾವು

ಇಸ್ರೇಲ್ ನ ಪಶ್ಚಿಮದ ನಗರವಾದ ಹೈಫಾದಲ್ಲಿ ಚೂರಿ ಇರಿತಕ್ಕೆ 70 ವರ್ಷದ ವ್ಯಕ್ತಿ ಸಾವಿಗೀಡಾಗಿ ಮೂವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
30 ವರ್ಷ ವಯಸ್ಸಿನ ಓರ್ವ ಪುರುಷ, ಓರ್ವ ಮಹಿಳೆ ಮತ್ತು ಹದಿನೈದು ವರ್ಷದ ಬಾಲಕನಿಗೆ ಗಂಭೀರ ಗಾಯವಾಗಿದೆ. ಬಸ್ ನಿಲ್ದಾಣದ ಸಮೀಪ ನಡೆದ ಈ ಕೃತ್ಯವನ್ನು ಇಸ್ರೇಲ್ ಪೊಲೀಸರು ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.
ಇಸ್ರೇಲ್ ಪೌರತ್ವ ಹೊಂದಿರುವ ಅರಬ್ ಮೂಲದ ವ್ಯಕ್ತಿ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಕೃತ್ಯದ ಬಗ್ಗೆ ಯಾರೂ ಕೂಡ ಹೊಣೆಗಾರಿಕೆಯನ್ನು ವಹಿಸಿಕೊಂಡಿಲ್ಲ.
ಗಾಝಾ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಚರ್ಚೆ ಇನ್ನೂ ಪ್ರಾರಂಭವಾಗಿಲ್ಲದ ಸಂದರ್ಭದಲ್ಲಿಯೇ ಈ ಕೃತ್ಯ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj