‘ಪಾಕಿಸ್ತಾನಿ’ ಎಂದು ಕರೆದ್ರೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಪರಾಧವಲ್ಲ: ಸುಪ್ರೀಂಕೋರ್ಟ್ ತೀರ್ಪು

ಯಾರಾದರು “ಮಿಯಾನ್-ಟಿಯಾನ್ ಅಥವಾ ಪಾಕಿಸ್ತಾನಿ ಎಂದು ಕರೆದರೆ ಇದು ಕೆಟ್ಟ ಅಭಿರುಚಿಯಾಗಿರಬಹುದೇ ಹೊರತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. “ಜಾರ್ಖಂಡ್ ಸರ್ಕಾರಿ ಕಚೇರಿಯ ಮುಸ್ಲಿಮ್ ಕ್ಲರ್ಕ್ ಒಬ್ಬರಿಗೆ ಹರಿ ನಂದನ್ ಸಿಂಗ್ ಎಂಬವರು “ಪಾಕಿಸ್ತಾನಿ” ಎಂದು ಹೀಯಾಳಿಸಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್ ವರೆಗೆ ತಲುಪಿತ್ತು.
“ಸರ್ಕಾರಿ ನೌಕರರೊಬ್ಬರನ್ನು ಪಾಕಿಸ್ತಾನಿ ಎಂದು ಕರೆದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಅಂತ್ಯ ಹಾಡಿದ ಸಂದರ್ಭದಲ್ಲಿ ಸುಪ್ರೀಂ ಪೀಠದ ಜಸ್ಟೀಸ್ ಬಿ.ವಿ.ನಾಗರತ್ನ ಹಾಗೂ ಜಸ್ಟೀಸ್ ಸತೀಶ್ ಚಂದ್ರ ಶರ್ಮಾ ಈ ಆದೇಶ ನೀಡಿದ್ದಾರೆ.
ಅಸಂಬದ್ಧ, ಆದರೆ ಇದು ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಪೀಠ ಹೇಳಿದೆ. “ಜಾರ್ಖಂಡ್ ಸರ್ಕಾರಿ ಕಚೇರಿಯ ಕ್ಲರ್ಕ್ ಒಬ್ಬರಿಗೆ ಹರಿ ನಂದನ್ ಸಿಂಗ್ ಎಂಬವರು “ಪಾಕಿಸ್ತಾನಿ” ಎಂದು ಹೀಯಾಳಿಸಿದ್ದರು.
ಈ ಹಿನ್ನಲೆಯಲ್ಲಿ ಕ್ಲರ್ಕ್, ಸಿಂಗ್ ವಿರುದ್ಧ ತನ್ನ ಧರ್ಮವನ್ನು ಉಲ್ಲೇಖಿಸಿ ನಿಂದಿಸಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದ. ಇದರ ಅನ್ವಯ ಸಿಂಗ್ ವಿರುದ್ಧ ಹಲವಾರು ಐಪಿಸಿ ಕಾಯ್ದೆಗಳಡಿ ಎಫ್ ಐಆರ್ ದಾಖಲಾಗಿತ್ತು.
ಪ್ರಕರಣ ರಾಜಸ್ಥಾನ್ ಹೈಕೋರ್ಟ್ ಮೆಟ್ಟಿಲೇರಿತ್ತು. ನಂತರ ಸುಪ್ರೀಂಕೋರ್ಟ್ ಅಂಗಳ ತಲುಪಿತ್ತು. ಸಿಂಗ್ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸಿಂಗ್ ಹೇಳಿಕೆ ಅಸಂಬದ್ಧ, ಆದರೆ ಇದು ಐಪಿಸಿ ಸೆಕ್ಷನ್ 298ರ ಅನ್ವಯ ಅಪರಾಧವಲ್ಲ ಎಂದು ತೀರ್ಪು ನೀಡಿ, ಸಿಂಗ್ ವಿರುದ್ಧದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj