ನಕ್ಸಲರ ದಾಳಿಗೆ 22 ಯೋಧರು ಹುತಾತ್ಮ | 32ಕ್ಕೂ ಅಧಿಕ ಯೋಧರಿಗೆ ಗಾಯ - Mahanayaka
1:20 PM Thursday 12 - December 2024

ನಕ್ಸಲರ ದಾಳಿಗೆ 22 ಯೋಧರು ಹುತಾತ್ಮ | 32ಕ್ಕೂ ಅಧಿಕ ಯೋಧರಿಗೆ ಗಾಯ

chhattisgarh
04/04/2021

ಸುಕ್ಮಾ: ನಕ್ಸಲರು ನಡೆಸಿದ ಅಟ್ಟಹಾಸಕ್ಕೆ 22 ಯೋಧರು ಹುತಾತ್ಮರಾಗಿದ್ದು, 32ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕ ಮಾದ್ವಿ ಹಿದ್ಮಾ ನೇತೃತ್ವದಲ್ಲಿ 300 ನಕ್ಸಲರು ಸಭೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಆರ್ ಪಿಎಫ್ ಯೋಧರು ನಕ್ಸಲರು ಇದ್ದ ಅರಣ್ಯ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ 200-300 ನಕ್ಸಲರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. 32 ಯೋಧರು ಗಾಯಗೊಂಡಿದ್ದಾರೆ.

ಯೋಧರು ಹಾಗೂ ನಕ್ಸಲರ ನಡುವೆ ಸುಮಾರು 4 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ನಕ್ಸಲರ ವಿರುದ್ಧ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ 15 ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ