ಮದುವೆಯಾದ ಮೂರೇ ದಿನದಲ್ಲಿ ಯುವಕ ಹೃದಯಾಘಾತದಿಂದ ಸಾವು

ಮಂಡ್ಯ: ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಿದ್ದ ಯುವಕನೊಬ್ಬ ಮದುವೆಯಾಗಿ ಮೂರೇ ದಿನದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಕೆ.ಆರ್.ಪೇಟೆ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಅವರ ಪುತ್ರ, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಐಟಿ ಉದ್ಯೋಗಿದ್ದ ಶಶಾಂಕ್(28), ಜಾರ್ಖಂಡ್ ಮೂಲದ ಅಷ್ಣಾರ ಎಂಬ ಯುವತಿಯನ್ನು ಪ್ರೀತಿಸಿ ಮಾರ್ಚ್ 2ರಂದು ಮೈಸೂರಿನ ರೆಸಾರ್ಟ್ ವೊಂದರಲ್ಲಿ ವಿವಾಹವಾಗಿದ್ದರು.
ಮದುವೆ ದಿನ ಶಶಾಂಕ್ ಗೆ ಸ್ವಲ್ಪ ಅನಾರೋಗ್ಯ ಕಾಡಿತ್ತು. ತನಗೆ ಜ್ವರ ಇರುವುದಾಗಿ ಸ್ನೇಹಿತರ ಜೊತೆಗೆ ಶಶಾಂಕ್ ಹೇಳಿಕೊಂಡಿದ್ದರಂತೆ. ಮಂಗಳವಾರ ಶಶಾಂಕ್ ಗೆ ಬೆಂಗಳೂರಿನ ತನ್ನ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ಆತನನ್ನು ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಶಶಾಂಕ್ ಕೊನೆಯುಸಿರೆಳೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: