ಐಟಿ ಕಂಪನಿಯೊಳಗೆ ಮಾಜಿ ಸಂಸದರ ಮೊಮ್ಮಗನಿಂದ ಗುಂಡು ಹಾರಾಟ: ಇಬ್ಬರ ಮೇಲೆ ಹಲ್ಲೆ

ಉತ್ತರ ಪ್ರದೇಶದ ಲಕ್ನೋದ ಐಟಿ ಕಂಪನಿ ಕಚೇರಿಯೊಳಗೆ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ವಿವೇಕ್ ಭದೌರಿಯಾ ಎಂದು ಗುರುತಿಸಲಾಗಿದೆ. ಈತ ಆಸ್ತಿ ಡೀಲರ್ ಆಗಿದ್ದು, ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ಮೊಮ್ಮಗನಾಗಿದ್ದಾನೆ. ಕೂಡಲೇ ವಿವೇಕ್ ನನ್ನು ಬಂಧಿಸಲಾಗಿದೆ.
ಕಂಪನಿಯ ಕಚೇರಿಯ ಬಳಿ ವಾಸಿಸುವ ಭದೌರಿಯಾ ಇದ್ದಕ್ಕಿದ್ದಂತೆ ಬಂದು ಗುಂಡು ಹಾರಿಸಿದ್ದಾರೆ.
ಅಲ್ಲದೇ ಆರೋಪಿಯು ಕಚೇರಿ ಆಪರೇಟರ್ ಅನುಜ್ ಕುಮಾರ್ ವೈಶ್ಯ ಮತ್ತು ಅಮಿತೇಶ್ ಶ್ರೀವಾಸ್ತವ ಅವರ ಮೇಲೆ ಪಿಸ್ತೂಲ್ ನಿಂದ ಹಲ್ಲೆ ನಡೆಸಿದ್ದಾರೆ. ಗುಂಡು ಹಾರಿಸುವ ಮೊದಲು ಅವರು ಅರ್ಧ ಡಜನ್ ಉದ್ಯೋಗಿಗಳನ್ನು ಬೆದರಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಾಗ ಪೊಲೀಸರು ಘಟನಾ ಸ್ಥಳದಿಂದ ಎರಡು ಬಂದೂಕುಗಳು, ಖಾಲಿ ಕಾರ್ಟ್ರಿಜ್ ಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಈ ಬಗ್ಗೆ ತನಿಖೆ ನಡೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj