ರಂಝಾನ್ ರಾತ್ರಿ ವಿಶೇಷ ನಮಾಝನ್ನು ಮುಗಿಸಿಕೊಂಡು ಹೋಗುತ್ತಿದ್ದವರ ಮೇಲೆ ಕೋಮುವಾದಿಗಳ ಹಲ್ಲೆ

ರಾತ್ರಿಯ ತರಾವೀಹ್ ನಮಾಝನ್ನು ಮುಗಿಸಿಕೊಂಡು ಮರಳುತ್ತಿದ್ದವರ ಮೇಲೆ ಕೋಮುವಾದಿಗಳು ಹಲ್ಲೆ ನಡೆಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ತರಾವೀಹ್ ನಮಾಝ್ ಮುಗಿದು ಮರಳುತ್ತಿದ್ದ ಸಂದರ್ಭದಲ್ಲಿ ಪಕ್ಕದ ಕಟ್ಟಡದಿಂದ ಕೋಮುವಾದಿಗಳು ಕಲ್ಲೆಸೆಯ ತೊಡಗಿದರು.
ಬಳಿಕ ಪಕ್ಕದ ಬೇರೆ ಬೇರೆ ಕಟ್ಟಡಗಳಿಂದ ಇಳಿದು ಬಂದ ಇವರು ಕತ್ತಿಯನ್ನು ತೋರಿಸಿ ಜೈ ಶ್ರೀ ರಾಮ್ ಎಂದು ಕೂಗುವಂತೆ ಬಲವಂತ ಪಡಿಸಿದ್ರು. ಬಳಿಕ ಮುಸ್ಲಿಮರ ಮೇಲೆ ಆಕ್ರಮಣ ನಡೆಸುವಂತೆ ಘೋಷಣೆಗಳನ್ನು ಕೂಗಿದ್ರು ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಈ ಕಲ್ಲೆಸೆತದಿಂದಾಗಿ 17 ವರ್ಷದ ಯುವಕನ ಸಹಿತ ಮೂವರಿಗೆ ಗಾಯಗಳಾಗಿವೆ. ಇದೇ ವೇಳೆ ಈ ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.
ಪೊಲೀಸರು ಅವರ ಹೆಸರನ್ನು ಬರೆಯಲು ನಿರಾಕರಿಸುತ್ತಿದ್ದಾರೆ, ಮಾತ್ರ ಅಲ್ಲ ನಿಮಗೆ ಇನ್ನಷ್ಟು ಸಮಸ್ಯೆಗಳಾಗದೇ ಇರಬೇಕಾದರೆ ನಿಮ್ಮ ಹೇಳಿಕೆಯನ್ನು ಬದಲಿಸಿ ಕೊಡಿ ಎಂದು ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂದು ಸಂತ್ರಸ್ತರು ದೂರಿಕೊಂಡಿದ್ದಾರೆ. ಇದೇ ವೇಳೆ ರಮಝಾನ್ ತಿಂಗಳು ಮುಗಿಯುವವರೆಗೆ ಈ ಪ್ರದೇಶದಲ್ಲಿ ಪೊಲೀಸರು ನಮಗೆ ರಕ್ಷಣೆ ನೀಡಬೇಕು ಎಂದು ಮುಸ್ಲಿಮರು ಕೇಳಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj