7ನೇ ವೇತನ ಆಯೋಗ: ಹೋಳಿ ಹಬ್ಬಕ್ಕೆ ಮುಂಚಿತವಾಗಿ ಮೋದಿ ಸರ್ಕಾರದಿಂದ ಈ ವಾರ ಡಿಎ ಹೆಚ್ಚಳದ ಘೋಷಿಸುವ ಸಾಧ್ಯತೆ?

ಡಿಎ ಮತ್ತು ಡಿಆರ್ ಈ ಬಾರಿ ಶೇಕಡಾ 2 ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. ಆದರೆ ಎಲ್ಲರ ಕಣ್ಣುಗಳು ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆಗೆ ಅಂಟಿಕೊಂಡಿವೆ. ಸೇವೆಯಲ್ಲಿರುವ ಸರ್ಕಾರಿ ನೌಕರರು ಡಿಎ ಪಡೆಯುತ್ತಾರೆ, ಪಿಂಚಣಿದಾರರು ಡಿಆರ್ ಪಡೆಯುತ್ತಾರೆ.
ಕೊನೆಯ ಡಿಎ ಹೆಚ್ಚಳವನ್ನು ಅಕ್ಟೋಬರ್ 2024 ರಲ್ಲಿ ಮಾಡಲಾಗಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 3 ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ.50ರಿಂದ ಶೇ.53ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ.
ತುಟ್ಟಿಭತ್ಯೆ (ಡಿಎ) ಹೆಚ್ಚಳವು ಕೈಗಾರಿಕಾ ಕಾರ್ಮಿಕರ ಸರಾಸರಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ-ಐಡಬ್ಲ್ಯೂ) ಆಧರಿಸಿದೆ. ಇದು ಜೀವನ ವೆಚ್ಚದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj