ಮುಸ್ಲಿಮರು ಹೋಳಿಯಂದು ಮನೆಯ ಒಳಗೆಯೇ ಇರಿ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ಮುಸ್ಲಿಮರು ಹೋಳಿಯಂದು ಮನೆಯ ಒಳಗೆಯೇ ಇರಿ. ಆ ಮೂಲಕ ಹಿಂದೂಗಳು ತಮ್ಮ ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೆ ಆಚರಿಸಲು ಬಿಡಿ ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಮನವಿ ಮಾಡಿದ್ದಾರೆ. ವಿಧಾನ ಸಭೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
“ಒಂದು ವರ್ಷದಲ್ಲಿ 52 ಶುಕ್ರವಾರಗಳು ಇರುತ್ತವೆ. ಅವುಗಳಲ್ಲಿ ಒಂದು ಹೋಳಿಯ ದಿನವೇ ಬಂದಿದೆ. ಆದ್ದರಿಂದ, ಮುಸ್ಲಿಮರು ಹಿಂದೂಗಳಿಗೆ ಹಬ್ಬವನ್ನು ಆಚರಿಸಲು ಬಿಡಬೇಕು. ಅವರ ಮೇಲೆ ಬಣ್ಣಗಳನ್ನು ಬಳಿದರೆ ನೊಂದುಕೊಳ್ಳಬಾರದು. ಅವರಿಗೆ ಅಂತಹ ಸಮಸ್ಯೆ ಇದ್ದರೆ, ಅವರು ಮನೆಯಲ್ಲೇ ಇರಬೇಕು. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ” ಎಂದು ಠಾಕೂರ್ ಹೇಳಿದರು.
ಮುಸ್ಲಿಮರು ರಮಝಾನ್ ಸಮಯದಲ್ಲಿ ಉಪವಾಸ ಆಚರಿಸುತ್ತಾರೆ. ಶುಕ್ರವಾರದಂದು ವಿಶೇಷ ಪ್ರಾರ್ಥನೆ ಮಾಡುತ್ತಾರೆ ಎಂದಾಗ, ಶಾಸಕ ಠಾಕೂರ್, “ಅವರದು ಯಾವಾಗಲೂ ದ್ವಿಮುಖ ನೀತಿ. ಬಣ್ಣದ ಪುಡಿ ಮಾರಾಟ ಮಾಡುವ ಅಂಗಡಿಗಳನ್ನು ಹಾಕುವ ಮೂಲಕ ಹಣ ಗಳಿಸಲು ಅವರಿಗೆ ಯಾವ ಅಡೆತಡೆಯೂ ಇಲ್ಲ. ಆದರೆ ಕೆಲವು ಬಣ್ಣದ ಕಲೆಗಳು ಅವರ ಬಟ್ಟೆಗಳ ಮೇಲೆ ಬಿದ್ದರೆ, ಅದು ಅವರಿಗೆ ಆಗುವುದಿಲ್ಲ”, ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಪ್ರತಿಕ್ರಿಯಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj