ಕ್ರೌರ್ಯ: ಪೊಲೀಸ್ ಬೂಟಿನ ಒದೆಗೆ ನವಜಾತ ಶಿಶು‌ ಸಾವು - Mahanayaka
12:02 PM Wednesday 12 - March 2025

ಕ್ರೌರ್ಯ: ಪೊಲೀಸ್ ಬೂಟಿನ ಒದೆಗೆ ನವಜಾತ ಶಿಶು‌ ಸಾವು

11/03/2025

ರಾಜಸ್ಥಾನದ ಅಲ್ ವಾರ್ ನಲ್ಲಿ ಪೊಲೀಸ್ ಬೂಟಿನ ಒದೆಗೆ ನವಜಾತ ಶಿಶು ಮೃತಪಟ್ಟ ಘಟನೆ ನಡೆದಿದ್ದು ಮಗುವಿನ ಕುಟುಂಬವನ್ನುಎಸ್ ಐ ಓ ರಾಷ್ಟ್ರೀಯ ಕಾರ್ಯದರ್ಶಿಗಳಾದ ಯೂನುಸ್ ಮುಲ್ಲಾ, ತಶ್ ರೀಫ್ ಮತ್ತು ಎಸ್ ಐ ಓ ರಾಜಸ್ಥಾನದ ಮುಖಂಡರಾದ ಶು ಹೈಬ್ ಮತ್ತು ಸಮರ್ ಮುಂತಾದವರನ್ನೊಳಗೊಂಡ ನಿಯೋಗವು ಭೇಟಿಯಾಗಿದೆ.

ಘಟನೆ ನಡೆದು ಒಂದು ವಾರ ಕಳೆದರೂ ಈವರೆಗೂ ಆರೋಪಿ ಪೊಲೀಸರ ವಿರುದ್ಧ ಯಾವ ಕ್ರಮವನ್ನು ಕೈಗೊಂಡಿಲ್ಲ ಅನ್ನುವುದು ಆಘಾತಕಾರಿಯಾಗಿದೆ. ಈ ಸಂತ್ರಸ್ತ ಕುಟುಂಬಕ್ಕೆ ನಷ್ಟ ಪರಿಹಾರವನ್ನು ನೀಡಬೇಕು ಮಾತ್ರ ಅಲ್ಲ ಆರೋಪಿ ಪೊಲೀಸರ ಬದಲು ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿ ಸತಾಯಿಸುತ್ತಿರುವ ಕ್ರಮವನ್ನು ರಾಜ್ಯ ಬಿಜೆಪಿ ಸರಕಾರ ತೊರೆಯಬೇಕು ಎಂದು ಎಸ್ಐಒ ಆಗ್ರಹಿಸಿದೆ.

ಸೈಬರ್ ಅಪರಾಧ ಎಸಗಿದ್ದಾರೆಂದು ಆರೋಪಿಸಿ ಅಲ್ ವಾರ್ ನಲ್ಲಿರುವ ಇಮ್ರಾನ್ ಎಂಬವರ ಮನೆಗೆ ಬೆಳ್ಳಂಬೆಳಗ್ಗೆ ಪೊಲೀಸರು ನುಗ್ಗಿದ್ದಾರೆ. ಮನೆಯ ಬಾಗಿಲನ್ನು ಒಡೆದು ಪ್ರವೇಶಿಸಿದ ಪೊಲೀಸರು ಇಮ್ರಾನ್ ಮತ್ತು ಆತನ ಪತ್ನಿಯನ್ನು ಹಿಡಿದು ಎಳೆದದ್ದಲ್ಲದೆ ಮಂಚದಲ್ಲಿ ಹೊದಿಕೆಯ ಒಳಗೆ ಮಲಗಿದ್ದ ಮಗುವಿನ ಮೇಲೆ ಪೊಲೀಸರು ಪಾದವೂರಿದ್ದಾರೆ.


Provided by

 

ಇದರಿಂದಾಗಿ ಸ್ಥಳದಲ್ಲೇ ಮಗು ಮೃತಪಟ್ಟಿದೆ. ಇದೀಗ ಅಪರಾಧವನ್ನು ಮುಚ್ಚಿಹಾಕಲು ಪೊಲೀಸರು ಮುಸ್ಲಿಂ ಯುವಕರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಸತಾಯಿಸುತ್ತಿದೆ ಎಂದು ಎಸ್ ಐ ಓ ಆರೋಪಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ