ವಾಟ್ಸಾಪ್ ಗ್ರೂಪ್ ನಿಂದ ತೆಗೆದು ಹಾಕಿದ ಅಡ್ಮೀನ್ ಮೇಲೆ ಗುಂಡು ಹಾರಿಸಿ ಕೊಲೆ! - Mahanayaka

ವಾಟ್ಸಾಪ್ ಗ್ರೂಪ್ ನಿಂದ ತೆಗೆದು ಹಾಕಿದ ಅಡ್ಮೀನ್ ಮೇಲೆ ಗುಂಡು ಹಾರಿಸಿ ಕೊಲೆ!

kerala news
11/03/2025

ಇಸ್ಲಾಮಾಬಾದ್: ವಾಟ್ಸಾಪ್  ಗ್ರೂಪ್ ನಿಂದ ತನ್ನನ್ನು ಹೊರ ಹಾಕಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ, ಗ್ರೂಪ್ ನ ಅಡ್ಮೀನ್ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿರುವ ವಿಲಕ್ಷಣ ಘಟನೆಯೊಂದು  ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿರುವ ಪೆಶಾವರ್ ನಲ್ಲಿ ನಡೆದಿದೆ.

ಮುಷ್ತಾಕ್ ಅಹ್ಮದ್ ಎಂಬಾತ ಗುಂಡೇಟಿಗೆ ಬಲಿಯಾದ ವಾಟ್ಸಾಪ್ ಗ್ರೂಪ್ ಅಡ್ಮೀನ್ ಆಗಿದ್ದಾನೆ. ಅಶ್ತಾಫ್ ಖಾನ್ ಎಂಬಾತ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂದವನಾಗಿದ್ದಾನೆ.

ಪೆಶಾವರ್ ನಗರದ ಹೊರವಲಯದ ರೇಗಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ಮುಷ್ತಾಕ್ ಅಹ್ಮದ್ ತಮ್ಮ ಸ್ಥಳೀಯ ಸ್ನೇಹಿತರನ್ನು ಸೇರಿಸಿಕೊಂಡು ವಾಟ್ಸಾಪ್ ಗ್ರೂಪ್ ರಚಿಸಿದ್ದರು. ಈ ಗ್ರೂಪ್ ನಲ್ಲಿ ಅಶ್ಫಾಕ್ ಖಾನ್ ಕೂಡ ಇದ್ದ.


Provided by

ಅಶ್ಫಾಕ್ ಖಾನ್ ಗ್ರೂಪ್ ನಲ್ಲಿ ಸಿಕ್ಕಿ ಸಿಕ್ಕಿದ ಮೆಸೆಜ್ ಗಳನ್ನೆಲ್ಲ ಶೇರ್ ಮಾಡುತ್ತಿದ್ದ. ಇದರಿಂದಾಗಿ ಇತರ ಸದಸ್ಯರಿಗೆ ಕಿರಿಕಿರಿ ಉಂಟಾಗಿತ್ತು. ಹೀಗಾಗಿ ಗ್ರೂಪ್ ನ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಗ್ರೂಪ್ ನ ಅಡ್ಮೀನ್  ಮುಷ್ತಾಕ್  ಹಲವು ಬಾರಿ ಅಶ್ಫಾಕ್ ಖಾನ್ ಗೆ ಸೂಚನೆ ನೀಡಿದ್ದರು. ಆದರೂ ಆತ ಅದನ್ನು ಲೆಕ್ಕಿಸದೇ ಮೆಸೆಜ್ ಮಾಡುತ್ತಲೇ ಇದ್ದ. ಹೀಗಾಗಿ ಆತನನ್ನು ಗ್ರೂಪ್ ನಿಂದ ತೆಗೆದು ಹಾಕಿದ್ದರು.

ಇದರಿಂದ ಆಕ್ರೋಶಗೊಂಡ ಅಶ್ಫಾಕ್ ಖಾನ್ ಮುಷ್ತಾಕ್ ಗೆ ಕರೆ ಮಾಡಿ ಗಲಾಟೆ ಮಾಡಿದ್ದ. ಬಳಿಕ ಇಬ್ಬರ ನಡುವೆ ಮಾತುಕತೆಗೆ ಆಹ್ವಾನ ಏರ್ಪಟ್ಟಿದ್ದು, ರೇಗಿ ಪ್ರದೇಶಕ್ಕೆ ಇಬ್ಬರು  ಬಂದಿದ್ದರು. ವಾದ ವಿವಾದದ ನಡುವೆ ಅಶ್ಫಾಕ್ ಖಾನ್ ಮುಷ್ತಾಕ್ ಮೇಲೆ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದು, ಮುಷ್ತಾಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ